ಲೈಂಗಿಕ ದಂಧೆ: ಅಸ್ಸಾಂ ಮೂಲದ ತಂಡ ತಿರುವನಂತಪುರದಲ್ಲಿ ಸೆರೆ

0
47

ತಿರುವನಂತಪುರ: ಉತ್ತರ ಭಾರತದಿಂದ ಮಹಿಳೆಯರನ್ನು ಹಾಗೂ ಬಾಲಕಿಯರನ್ನು ತಂದು ರಾಜ್ಯದಲ್ಲಿ ಲೈಂಗಿಕ ದಂಧೆ ನಡೆಸುವ ತಂಡವನ್ನು ತಿರುವನಂತಪುರದಲ್ಲಿ  ಅಸ್ಸಾಂ ಪೊಲೀಸರು ಇಂದು ಬಂಧಿಸಿದ್ದಾರೆ.  ಒಂಭತ್ತು ಮಂದಿ ಮಹಿಳೆಯರು, ಒಂಭತ್ತು ಪುರುಷರು ಬಂಧಿತರಲ್ಲಿ ಒಳಗೊಂಡಿದ್ದಾರೆ.  ಪ್ರಾಯ ಪೂರ್ತಿಯಾಗದ ಬಾಲಕಿ ಯರು  ಈ ತಂಡದ ವಶದಲ್ಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.  ಲೈಂಗಿಕ ದಂಧೆಯ ಪ್ರಮುಖರಲ್ಲಿ ಅಸ್ಸಾಂ ನಿವಾಸಿಗಳಾದ ಮುಸಾಹುಲ್ ಹಕ್, ರಬುಲ್ ಹುಸೈನ್ ಎಂಬಿವರೂ ಒಳಗೊಂ ಡಿದ್ದಾರೆ.  ಉತ್ತರ ಭಾರತದಿಂದ  ಮಹಿಳೆಯರನ್ನು ಕೇರಳಕ್ಕೆ ತಲುಪಿಸಿ ಲೈಂಗಿಕ ದಂಧೆ ನಡೆಸುವ ಬಗ್ಗೆ  ಅಸ್ಸಾಂ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಈ ತಿಂಗಳ ೧೧ರಂದು  ಬಂಧಿಸಲ್ಪಟ್ಟ ತಂಡದ ಪ್ರಮುಖರನ್ನು ಆರೋಪಿಗಳಾಗಿಸಿ ಅಸ್ಸಾಂ ಪೊಲೀಸರು ಕೇಸು ದಾಖಲಿಸಿದ್ದರು. ಇವರ ಮೊಬೈಲ್ ಫೋನ್ ಕಾಲ್ ಪರಿಶೀಲನೆ ನಡೆಸಿದ ತಂಡಕ್ಕೆ  ಉಳಿದ ಸದಸ್ಯರು ತಿರುವನಂತಪುರ ದಲ್ಲಿರುವುದಾಗಿ ತಿಳಿದುಬಂದಿದೆ.

ಅದರಂತೆ ಅಸ್ಸಾಂ ಪೊಲೀಸರು ನಿನ್ನೆ ತಿರುವನಂತಪುರಕ್ಕೆ ತಲುಪಿ ದ್ದಾರೆ.  ಕೇರಳ ಪೊಲೀಸರ ಸಹಾಯ ದೊಂದಿಗೆ ಶ್ಯಾಡೋ ಪೊಲೀಸರ ಬೆಂಗಾವಲಿನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ತಿರುವನಂತಪುರ ಮೆಡಿ ಕಲ್ ಕಾಲೇಜು, ತಂಬಾನೂರು ಪರಿ ಸರದ ಹೊಟೆಲ್‌ಗಳಲ್ಲಿ ದಾಳಿ ನಡೆಸ ಲಾಗಿದೆ. ಅನ್ಯರಾಜ್ಯ ಕಾರ್ಮಿಕರಾದ ಇಬ್ಬರನ್ನು ಸಹಾ ವಶಕ್ಕೆ ತೆಗೆದುಕೊಳ್ಳ ಲಾಗಿದೆ.  ಬಂಧಿತರನ್ನು ಅಸ್ಸಾಂಗೆ ಕೊಂಡೊಯ್ಯಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY