ಚೋಯಿಮೂಲೆ ನಿವಾಸಿ ಸುಳ್ಯದಲ್ಲಿ ಮೃತ್ಯು

0
62

ನೀರ್ಚಾಲು: ಇಲ್ಲಿನ ಮಾಡತ್ತಡ್ಕ ಚೋಯಿಮೂಲೆ ನಿವಾಸಿ ಸುಳ್ಯದಲ್ಲಿ ಹೃದ ಯಾಘಾತದಿಂದ ಮೃತಪಟ್ಟರು. ಚೋಯಿಮೂಲೆ  ನಿವಾಸಿ ಮಾಥ್ಯೂ-ಕುಟ್ಟಿ ಅಮ್ಮ ದಂಪತಿ ಯ ಪುತ್ರ ಮನೋಜ್ (೫೦) ಮೃತಪಟ್ಟ ವ್ಯಕ್ತಿ. ನೀಲೇಶ್ವರ  ನಿವಾಸಿಯಾದ ಇವರು ಕಳೆದ ೧೫ ವರ್ಷಗಳಿಂದ ಚೋಯಿ ಮೂಲೆ ಯಲ್ಲಿ ವಾಸಿಸುತ್ತಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ಇವರು ಸುಳ್ಯದಲ್ಲಿ ಅನಾನಸು ಕೃಷಿ ನಡೆಸುತ್ತಿದ್ದರು. ನಿನ್ನೆ ಮಧ್ಯಾಹ್ನ ಇವರಿಗೆ ಅನಾನಸು ತೋಟದಲ್ಲಿರು ವಾಗ ಎದೆನೋವು ಕಾಣಿಸಿ ಕೊಂಡಿದೆ. ಕೂಡಲೇ ಅವರನ್ನು ಸುಳ್ಯ ಆಸ್ಪತ್ರೆಗೆ ನಂತರ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಮಿನಿ, ಮಕ್ಕಳಾದ ಅಮಲ್, ಅಸಿಮಾ, ಸಹೋದರ-ಸಹೋದರಿಯರಾದ ಮಂಜು, ಮಿನಿ, ಬಿನು ಎಂಬಿವರನ್ನು ಅಗಲಿದ್ದಾರೆ.

NO COMMENTS

LEAVE A REPLY