ಕೋವಿಡ್: ನಿಯಂತ್ರಣ ಸಡಿಲಿಕೆ ಇಂದು, ನಾಳೆ ಮುಂದುವರಿಕೆ

0
30

ತಿರುವನಂತಪುರ: ರಾಜ್ಯದಲ್ಲಿ ಬಕ್ರೀದ್ ಅಂಗವಾಗಿ ಕೋವಿಡ್ ನಿಯಂತ್ರಣದಲ್ಲಿನ ಸಡಿಲಿಕೆ ಇಂದು ಹಾಗೂ ನಾಳೆ ಇರಲಿದೆ. ಕೋವಿಡ್ ರೋಗ ಪೀಡಿತ ಎ,ಬಿ,ಸಿ ವಿಭಾಗ ಪ್ರದೇಶಗಳಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಬಹುದಾಗಿದೆ.  ಇದೇ ವೇಳೆ ಟ್ರಿಪಲ್ ಲಾಕ್‌ಡೌನ್ ಇರುವ ಡಿ ವಿಭಾಗ ಪ್ರದೇಶದಲ್ಲಿ ಇಂದು ಎಲ್ಲಾ ಅಂಗಡಿಗಳು ತೆರೆದಿವೆ.  ಎ,ಬಿ ವಿಭಾಗ ಪ್ರದೇಶಗಳಲ್ಲಿ ಬೆವ್‌ಕೋ, ಕನ್ಸ್ಯೂ ಮರ್ ಫೆಡ್ ಮದ್ಯದಂಗಡಿಗಳು, ಬಾರ್‌ಗಳು ಇಂದಿನಿಂದ ಕಾರ್ಯಾಚರಿಸಲಿವೆ.

ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಇಂದು ಕಾರ್ಯಾಚರಿ ಸುತ್ತಿವೆ. ಡ್ರೈವಿಂಗ್ ಟೆಸ್ಟ್ ತರಬೇತಿ ಇಂದಿನಿಂದ ಪುನರಾರಂಭಗೊಂಡಿದೆ. ವಾಹನದಲ್ಲಿ ಇನ್‌ಸ್ಟ್ರಕ್ಟರ್ ಹೊರತು ಓರ್ವ ಮಾತ್ರ ಇರಬಹುದಾಗಿದೆ.

NO COMMENTS

LEAVE A REPLY