ತಲಪಾಡಿಯಲ್ಲಿ ಸಂಯೋಜಿತ ಚೆಕ್‌ಪೋಸ್ಟ್‌ಗೆ ಸಚಿವರಿಂದ ಶಿಲಾನ್ಯಾಸ

0
42

ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಹೊಸತಾಗಿ ನಿರ್ಮಿಸುವ ಸಂಯೋಜಿತ ಚೆಕ್‌ಪೋಸ್ಟ್ ಕಟ್ಟಡಕ್ಕೆ ಶಿಲಾನ್ಯಾಸವನ್ನು ಅರಣ್ಯ-ವನ್ಯಜೀವಿ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ಆನ್‌ಲೈನ್‌ನಲ್ಲಿ ನಿರ್ವಹಿಸಿದರು. ಸಂಯೋಜಿತ ಫಾರೆಸ್ಟ್ ಚೆಕ್‌ಪೋಸ್ಟ್ ಸಮುಚ್ಛಯಗಳು ೧೦.೨೭ ಕೋಟಿ ರೂ.ವೆಚ್ಚದಲ್ಲೂ, ಫಾರೆಸ್ಟ್ ಸ್ಟೇಶನ್‌ಗಳು ೧೧.೨೭ ಕೋಟಿ ರೂ. ವೆಚ್ಚದಲ್ಲೂ ನಿರ್ಮಿಸಲಾಗುವುದು. ಮುಂದಿನ ಮಾರ್ಚ್‌ನಲ್ಲಿ  ಕಾಮಗಾರಿ ಪೂರ್ತಿಯಾಗಲಿದೆಯೆಂದು ಸಚಿವರು ತಿಳಿಸಿದರು. ರಾಜ್ಯದಲ್ಲೇ ಪ್ರಥಮವಾಗಿ ಈ ಸಂಯೋಜಿತ ಚೆಕ್‌ಪೋಸ್ಟ್ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಮಾಹಿತಿ ವಿಜ್ಞಾನ ಕೇಂದ್ರ, ವನಶ್ರೀ ಇಲಾಖೆ ಶಾಪ್, ಇತರ ಸಂಬಂಧಪಟ್ಟ ಸೌಕ ರ್ಯಗಳು ಎಂಬಿವು ಸೇರಿಸಿಕೊಂಡು ಪ್ರಧಾನ ಚೆಕ್‌ಪೋಸ್ಟ್ ಗಳನ್ನು ಸಂಯೋಜಿಸಿಕೊಂಡು ಫಾರೆಸ್ಟ್ ಚೆಕ್ ಪೋಸ್ಟ್  ಕಾಂಪ್ಲೆಕ್ಸ್ ಗಳನ್ನಾಗಿ ಬದಲಿಸುವುದಾಗಿ ಈ ಯೋಜನೆ. ಎಲ್ಲಾ ೧೪ ಜಿಲ್ಲೆಗಳಲ್ಲೂ ಈ ರೀತಿಯ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು. ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದರು. ಡಿವಿಶನಲ್ ಫಾರೆಸ್ಟ್ ಆಫೀಸರ್ ಅಜಿತ್.ಕೆ, ರಾಮನ್, ರೇಂಜ್ ಆಫೀಸರ್  ಟಿ.ಜಿ.ಸುಲೈಮಾನ್, ಅಧಿಕಾರಿಗಳು ಭಾಗವಹಿಸಿದರು.

NO COMMENTS

LEAVE A REPLY