ಲೀಗಲ್ ಮೆಟ್ರಾಲಜಿ ಸಚಿವರಿಂದ ನಿರ್ಮಾಣ ಚಟುವಟಿಕೆಗೆ ಚಾಲನೆ

0
26

ಕಾಸರಗೋಡು: ಕಾಸರಗೋಡಿ ನಲ್ಲಿ ಮಲಬಾರ್  ಪ್ರದೇಶದ ಮೊದಲ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೇಟರಿ ಮತ್ತು ಟ್ಯಾಂಕರ್ ಲಾರಿ ಕಲಾಬ್ರೇಷನ್ ಯೂನಿಟ್ ಸ್ಥಾಪನೆಗೊಳ್ಳಲಿದ್ದು, ಜು. ೨೨ರಂದು ಆನ್‌ಲೈನ್ ಮೂಲಕ ಲೀಗಲ್ ಮೆಟ್ರಾಲಜಿ ಸಚಿವ ಜಿ.ಆರ್. ಅನಿಲ್ ಕುಮಾರ್ ನಿರ್ಮಾಣ ಚಟುವಟಿಕೆಗೆ ಚಾಲನೆ ನೀಡುವರು. ಬಟ್ಟತ್ತೂರು-ಪಳ್ಳಿಕ್ಕರೆಯಲ್ಲಿ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ಪ್ರದರ್ಶಿಸಲಾಗುವುದು. ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಪನೆಯಾಲ ಬಟ್ಟತ್ತೂರಿನ ಕಾಸರಗೋಡು- ಕಾಞಂಗಾಡ್ ರಾಷ್ಟ್ರೀಯ ಹೆದ್ದಾರಿ ೬೬ರ ಬಳಿಯಲ್ಲಿ ೧.೯೫ ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳಲಿದೆ.

NO COMMENTS

LEAVE A REPLY