ವಾರ್ಡ್ ಮಟ್ಟದಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಿಸಲು ಕ್ರಮ ಆರಂಭ

0
29

ಪೆರ್ಲ: ಕೋವಿಡ್ ಲಸಿಕೆ ವಿತರಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಎಣ್ಮಕಜೆ ಪಂ ಚಾಯತ್‌ನ ಪ್ರತಿ ವಾರ್ಡ್‌ಗಳಲ್ಲಿಯೂ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ವಾರ್ಡ್‌ನ ನಿರ್ದೇಶಿತ ಕೇಂದ್ರದಲ್ಲಿ ಸ್ಥಳದಲ್ಲಿಯೇ ಫಲಾನು ಭವಿಗಳ ಹೆಸರು ನೋಂದಾಯಿಸುವ ಮೂಲಕ ವ್ಯಾಕ್ಸಿನ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.  ಈಗಾಗಲೇ ೧,೨,೩,೪ನೇ ವಾರ್ಡ್ ಗಳಲ್ಲಿ ಪ್ರಥಮ ಹಂತದ ವ್ಯಾಕ್ಸಿನ್ ವಿತರಣೆ ನಡೆದಿದ್ದು, ದಿನಂಪ್ರತಿ ಸೂಚಿತ ವಾರ್ಡ್ ಗಳಲ್ಲಿ ಆರೋಗ್ಯ ಇಲಾಖೆ ನಿಗದಿಪಡಿಸಿದಷ್ಟು ವ್ಯಾಕ್ಸಿನ್ ವಿತರಣೆ ನಡೆಯಲಿದೆ. ಇದರ ಜತೆಗೆ ದ್ವಿತೀಯ ಡೋಸ್ ಪಡೆದು ಕೊಳ್ಳುವವರು ಭಾಗವಹಿಸಬಹುದಾಗಿದೆ. ಪ್ರತಿಯೊಂದೆಡೆಯೂ ಕೋವಿಡ್ ೧೯ ಮಾನದಂಡಗಳನ್ನು ಪಾಲಿಸಿಕೊಂಡು ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ.  ಎಲ್ಲಾ ವಾರ್ಡ್‌ಗಳಲ್ಲಿಯೂ ಒಂದೇ ಬಾರಿಗೆ ವ್ಯಾಕ್ಸಿನ್ ಲಭ್ಯವಾಗದಿದ್ದರೂ ಯಾರೂ ಆತಂಕಪಡಬೇಕಿಲ್ಲ. ಮುಂದಿನ ದಿನಗಳಲ್ಲಿ ಸಂಪೂರ್ಣ ಲಸಿಕೆ ಅಭಿಯಾನ ನಡೆಸಲಾಗುತ್ತದೆ. ವ್ಯಾಕ್ಸಿನ್ ವಿತರಣೆ ಹಂತಹಂತವಾಗಿ ನಡೆಸುವುದರಿಂದ ಜನಸಂದಣಿಯಾ ಗದ ರೀತಿಯಲ್ಲಿ ವಾರ್ಡ್‌ನ ಜನತೆ ಸಹಕರಿಸಬೇಕೆಂದು ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ತಿಳಿಸಿದ್ದಾರೆ.

NO COMMENTS

LEAVE A REPLY