ಟಿ.ಪಿ. ಚಂದ್ರಶೇಖರನ್ ಪುತ್ರನಿಗೆ ಹತ್ಯೆ ಬೆದರಿಕೆ

0
25

ಕಲ್ಲಿಕೋಟೆ: ಆರ್.ಎಂ.ಪಿ. ನೇತಾರನಾಗಿದ್ದ ಟಿ.ಪಿ. ಚಂದ್ರಶೇಖರನ್‌ರ ಪುತ್ರ ಅಭಿನಂದ್ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್. ವೇಣು ಅವರಿಗೆ ಕೊಲೆ ಬೆದರಿಕೆಯೊಡ್ಡಿ ಪತ್ರ ಲಭಿಸಿದ ಬಗ್ಗೆ ದೂರಲಾಗಿದೆ. ಶಾಸಕಿ ಕೆ.ಕೆ. ರಮ ಅವರ ಕಚೇರಿ ವಿಳಾಸದಲ್ಲಿ ಪತ್ರ ಲಭಿಸಿರುತ್ತದೆ. ಪಿ.ಜೆ. ಬಾಯ್ಸ್ ಎಂಬ ಹೆಸರಲ್ಲಿ ಬೆದರಿಕೆ ಪತ್ರ ಬರೆದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಎನ್. ವೇಣು ವಡಗರ ಎಸ್.ಪಿಗೆ ದೂರು ನೀಡಿದ್ದಾರೆ. ಟಿ.ಪಿ. ಚಂದ್ರಶೇಖರ್‌ರಿಗೆ ೫೧ ಇರಿತದಿಂದ ಕೊಲೆಗೈದುದಾದರೆ ಮಗನನ್ನು ನೂರು ಇರಿತಗೈದು ಕೊಲೆಗೈಯ್ಯುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ಚಾನೆಲ್ ಚರ್ಚೆಯಲ್ಲಿ ಎ.ಎಸ್. ಶಂಸೀರ್ ವಿರುದ್ಧ ಏನೂ ಹೇಳಕೂಡದು. ಶಂಸೀರ್ ಭಾಗವಹಿಸುವ ಚರ್ಚೆಯಲ್ಲಿ ಆರ್.ಎಂ.ಪಿ. ನೇತಾರರು ಭಾಗವ ಹಿಸಕೂಡದು ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಮುನ್ನೆಚ್ಚರಿಕೆ ನೀಡಿದರೂ ಅದಕ್ಕೆ ಕಿವಿಗೊಡದಿರುವುದೇ ಟಿ.ಪಿ. ಚಂದ್ರಶೇಖರನ್‌ರನ್ನು ಹತ್ಯೆಗೈಯ್ಯಲು ಕಾರಣವೆಂದು ಪತ್ರದಲ್ಲಿ ತಿಳಿಸಲಾಗಿ ದೆಯೆನ್ನಲಾಗಿದೆ.

NO COMMENTS

LEAVE A REPLY