ರಾಜ್ಯದಲ್ಲಿ ಕೋವಿಡ್ ಟಿಪಿಆರ್ ಹೆಚ್ಚಳ: ಆರೋಗ್ಯ ವಲಯದಲ್ಲಿ ಹೆಚ್ಚಿದ ಆತಂಕ

0
26

ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ರೋಗ ತಪಾಸಣಾ ಪಟ್ಟಿ (ಟಿಪಿಆರ್) ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ೧೧ ಶೇಕಡಾ ದಾಟಿದೆ. ನಿನ್ನೆ ರಾಜ್ಯದಲ್ಲಿ ೯೯೩೧ ಮಂದಿಗೆ ಕೋವಿಡ್ ದೃಢೀಕgಣಗೊಂಡಿದ್ದು, ಟಿಪಿಆರ್ ೧೧.೦೮ ಶೇಕಡಾ ಆಗಿದೆ. ಮುಂದಿನ ದಿನಗಳಲ್ಲಿ ಟಿಪಿಆರ್ ಇನ್ನಷ್ಟು ಹೆಚ್ಚಲಿದೆಯೇ ಎಂಬ ಆತಂಕ ಆರೋಗ್ಯ ಅಧಿಕಾರಿಗಳಲ್ಲಿ ಉಂಟಾಗಿದೆ. ರಾಜ್ಯದಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ೧೬೧೫ ಮಂದಿಗೆ ಕೋವಿಡ್ ದೃಢೀಕರಣಗೊಂಡಿದ್ದು, ಪ್ರಥಮ ಸ್ಥಾನದಲ್ಲಿದೆ. ಕಲ್ಲಿಕೋಟೆಯು ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕಳೆದ ೨೪ ಗಂಟೆಯಲ್ಲಿ ೮೯,೬೫೪ ಸ್ಯಾಂಪಲ್ ಗಳನ್ನು ಪರಿಶೀಲಿಸಲಾಗಿದೆ. ದೇಶದಲ್ಲಿ ನಿನ್ನೆ ೩೮,೧೬೪ ಮಂದಿಗೆ ರೋಗ ದೃಢೀಕರಣಗೊಂಡಿದೆ. ೪೯೯ ಮಂದಿ  ಕೋವಿಡ್ ಬಾಧಿಸಿ ಮೃತಪಟ್ಟಿರುವು ದಾಗಿ ತಿಳಿದುಬಂದಿದೆ. ಇದೇ ವೇಳೆ  ದೇಶದಲ್ಲಿನ ಕೋವಿಡ್ ರೋಗಿಗಳಲ್ಲಿ ಅರ್ಧ ಭಾಗ ಕೇರಳ ಹಾಗೂ ಮಹಾ ರಾಷ್ಟ್ರಗಳಲ್ಲಿ ದೃಢೀಕರಣ ಗೊಂಡವರಾಗಿದ್ದು, ಇದು ಆತಂಕಕ್ಕೆ ಕಾರಣವಾಗಿಯೆಂದೂ ತಿಳಿದುಬಂ ದಿದೆ. ೩ನೇ ಕೋವಿಡ್ ಅಲೆ ಯಾವುದೇ ಕ್ಷಣದಲ್ಲಿ ಕಂಡುಬರಲಿದೆ.  ಅದರ ಮೊದಲು ರೋಗಿಗಳ ಸಂಖ್ಯೆಯನ್ನು ಕಡಿಮೆಗೊ ಳಿಸಲು ಆರೋಗ್ಯ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ.

NO COMMENTS

LEAVE A REPLY