ಕಾಸರಗೋಡು ಮೆಡಿಕಲ್ ಕಾಲೇಜಿಗೆ ೩೭ ಕೋಟಿ ರೂ. ಯೋಜನೆ

0
39

ಕಾಸರಗೋಡು: ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿಗೆ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ನಿರ್ಮಿಸಲು ೨೯ ಕೋಟಿ ರೂಪಾಯಿಯ ತಾಂತ್ರಿಕ ಅನುಮತಿ ಲಭಿಸಿದೆ. ಅಲ್ಲದೆ ಮೆಡಿಕಲ್ ಕಾಲೇಜಿಗೆ ನೀರಾವರಿ ವ್ಯವಸ್ಥೆ ಏರ್ಪಡಿ ಸಲು ೮ ಕೋಟಿ ರೂಪಾಯಿ  ಮಂಜೂರು ಮಾಡಲಾಗಿದೆ. ರೆಸಿಡೆನ್ಶಿ ಯಲ್ ಕಾಂಪ್ಲೆಸ್‌ಗೆ ಮಂಜೂರು ಮಾಡಿದ ೩೭ ಕೋಟಿ ರೂಪಾಯಿಯಲ್ಲಿ ೧೪ಕೋಟಿ ರೂಪಾಯಿ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಿಸಲು, ಅಧ್ಯಾಪಕರ ಕ್ವಾರ್ಟ ರ್ಸ್‌ಗಾಗಿ ೧೧ ಕೋಟಿ ರೂಪಾಯಿ  ಮೀಸಲಿರಿಸಲಾಗಿದೆ. ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನ ಹೊರಗಿನ ಜಲ ವಿತರಣೆ ಚರಂಡಿಗೆ ೬೪ ಲಕ್ಷ ರೂಪಾಯಿ, ಗರ್ಲ್ಸ್ ಹಾಸ್ಟೆಲ್ ಗಿರುವ ಜಲ ವಿತರಣೆಗೆ ೬೮ ಲಕ್ಷ ರೂಪಾಯಿ, ಟೀಚರ್ಸ್ ಕ್ವಾರ್ಟರ್ಸ್‌ಗೆ ಜಲವಿತರಣೆಗೆ ೭೪ ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಗರ್ಲ್ಸ್ ಹಾಸ್ಟೆಲ್‌ಗೆ ೬೬೦೦ ಚದರ ಮೀಟರ್ ವಿಸ್ತೀರ್ಣ, ೪ ಅಂತಸ್ತುಗಳಿರುವುದು. ಟೀಚರ್ಸ್ ಕ್ವಾರ್ಟರ್ಸ್‌ನ ೯ ಮಹಡಿ ಗಳನ್ನು ೪೮೧೯ ಚದರ ಮೀಟರ್‌ನಲ್ಲಿ ನಿರ್ಮಿಸಲಾಗುವುದು. ಜಿಲ್ಲಾಧಿಕಾರಿ ಭಂ ಡಾರಿ ಸ್ವಾಗತ್ ರಣವೀರ್‌ಚಂದ್ ಅಧ್ಯಕ್ಷೆ ತೆಯಲ್ಲಿ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಯೋಜನೆಗೆ ಅಂಗೀಕಾರ  ನೀಡಿದೆ.

NO COMMENTS

LEAVE A REPLY