ವಾರಾಂತ್ಯ ಲಾಕ್‌ಡೌನ್ ಹಿಂತೆಗೆತ ಸಾಧ್ಯತೆ

0
42

ತಿರುವನಂತಪುರ: ರಾಜ್ಯದಲ್ಲಿ ಶನಿವಾರ ಹಾಗೂ ಆದಿತ್ಯವಾg ಗಳಂದು ಏರ್ಪಡಿಸಿದ ವಾರಾಂತ್ಯ ಲಾಕ್‌ಡೌನ್ ರದ್ದುಪಡಿಸಲು ಸರಕಾರ ಚಿಂತನೆ ನಡೆಸಿದೆ. ಇಂದು ಸಂಜೆ ತಿರುವನಂತಪುರದಲ್ಲಿ ನಡೆಯುವ ಕೋವಿಡ್ ಅವಲೋಕನಾ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಉಂಟಾಗಲಿದೆ.

ರಾಜ್ಯದಲ್ಲಿ ಬಕ್ರೀದ್ ಉತ್ಸವ ನಾಳೆ ನಡೆಯಲಿದೆ. ಅದೇ ವೇಳೆ ಮುಂದಿನ ದಿನಗಳಲ್ಲಿ ಓಣಂ ಹಬ್ಬವು ಬರಲಿದೆ.  ಓಣಂ ಹಬ್ಬದ ವೇಳೆ ಲಾಕ್‌ಡೌನ್ ಘೋಷಿಸಿದರೆ ಅದು ವ್ಯಾಪಾರ ವಲಯದಲ್ಲಿ ಭಾರೀ ಹೊಡೆತವುಂಟಾಗಲಿದೆ ಮಾತ್ರವಲ್ಲ ಅನಿಯಂತ್ರಿತವಾದ ಲಾಕ್‌ಡೌನ್ ವಿರುದ್ಧ ವ್ಯಾಪಾರಿಗಳು ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ.

ಇದೇ ವೇಳೆ ೧೫ ಶೇಕಡಾಗಿಂತ ಹೆಚ್ಚು ಟಿಪಿಆರ್ ಹೊಂದಿದ ಪ್ರದೇಶದಲ್ಲಿ ಟ್ರಿಬಲ್ ಲಾಕ್‌ಡೌನ್ ಹೇರಿದ ನಿರ್ಧಾರದ ಬಗ್ಗೆಯೂ ಮರು ಚಿಂತನೆ ನಡೆಸುವ  ಸಾಧ್ಯತೆಯಿದೆಯೆಂದು ತಿಳಿದುಬಂದಿದೆ. ಒಂದು ಪ್ರದೇಶದಲ್ಲಿ ಹೆಚ್ಚು ರೋಗಿಗಳಿದ್ದರೆ ಆ ಪಂಚಾಯತ್‌ನಲ್ಲಿ ನಿಯಂತ್ರಣ ಹೇರುವುದು ಸರಿಯಲ್ಲ ಎಂದು ವ್ಯಾಪಾರಿಗಳು ಈ ಹಿಂದೆಯೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ರೋಗವಿರುವ ಪ್ರದೇಶವನ್ನು ಮಾತ್ರ ಕಂಟೋನ್ಮೆಂಟ್ ವಲಯವಾಗಿ ಘೋಷಿಸಿ ನಿಯಂತ್ರಣ ಹೇರಲು ಸರಕಾರ ಚಿಂತನೆ ನಡೆಸಿದೆ.

ಇಂದು ಸಂಜೆ ನಡೆಯುವ ಅವಲೋಕನಾ ಸಭಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳ ಲಾಗುವುದೆಂದು ಅಧಿಕಾರಿ ಮೂಲಗಳು ತಿಳಿಸಿವೆ.

 

NO COMMENTS

LEAVE A REPLY