ಸೊತ್ತುತರ್ಕದಿಂದ ಹಲ್ಲೆ: ಸಂಬಂಧಿಕನ ವಿರುದ್ಧ  ನರಹತ್ಯಾ ಯತ್ನ ಕೇಸು

0
89

ಉಪ್ಪಳ: ಸೊತ್ತು ತರ್ಕದಿಂದ ಸಂಬಂಧಿಕ ಹಲ್ಲೆಗೈದ ಘಟನೆಯಲ್ಲಿ ಆರೋಪಿ ವಿರುದ್ದ ನರಹತ್ಯಾಯತ್ನ ಕೇಸು ದಾಖಲಿಸಲಾಗಿದೆ. ಕುಬ ಣೂರು ಒಡ್ಡಂಬೆಟ್ಟು ನಿವಾಸಿ ದುಗ್ಗಪ್ಪ ಶೆಟ್ಟಿಯವರ ಪುತ್ರ ಶಿವಪ್ರಸಾದ್ ಶೆಟ್ಟಿ (೪೮)ಗೆ 

ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪರಿಸರ ನಿವಾಸಿ ಹರಿ ನಾಥ ಭಂಡಾರಿ ವಿರುದ್ದ ನರಹತ್ಯಾ ಯತ್ನ ಕೇಸು ಕುಂಬಳೆ ಪೊಲೀಸರು ದಾಖಲಿಸಿದ್ದಾರೆ. ಮೊನ್ನೆ ರಾತ್ರಿ ೪ ಗಂಟೆಗೆ ಘಟನೆ ನಡೆದಿದೆ. ಕಬ್ಬಿಣದ ಸಲಾಖೆಯಿಂದ ಶಿವಪ್ರಸಾದ್‌ರ ತಲೆಗೆ ಬಡಿದಿದ್ದು, ಗಾಯಾಳು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು. ಶಿವಪ್ರಸಾದ್ ಶೆಟ್ಟಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY