ಒಲಿಂಪಿಕ್: ಕ್ರೀಡಾ ಜ್ಯೋತಿ ರ‍್ಯಾಲಿ ಇಂದು

0
84

ಕಾಸರಗೋಡು: ಟೋಕಿಯೋ ಒಲಿಂಪಿಕ್ಸ್‌ಗೆ ಶುಭಕೋರಿ ಜಿಲ್ಲಾ ಕ್ರೀಡಾ ಮಂಡಳಿಯಿಂದ ಕ್ರೀಡಾ ಜ್ಯೋತಿ ರ‍್ಯಾಲಿ ಇಂದು ಸಂಜೆ ನಡೆಯಲಿದೆ. ೪ ಗಂಟೆಗೆ ನಗರದ ಹೊಸ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಯಲಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್  ಕ್ರೀಡಾಜ್ಯೋತಿಯನ್ನು ರಾಷ್ಟ್ರೀಯ ಮಟ್ಟದ ಕಾರು ರ‍್ಯಾಲಿ ಪಟು ಮೂಸಾ ಶರೀಫ್  ಮೋಟಾರ್ ಬೈಕ್ ರೈಡರ್ ಸೌಮ್ಯ, ಪಿ.ಎನ್.ಗೆ ಹಸ್ತಾಂತರಿಸಿ ಚಾಲನೆ ನೀಡುವರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್ ಅಧ್ಯಕ್ಷತೆ ವಹಿಸುವರು.

NO COMMENTS

LEAVE A REPLY