ಕಾಞಂಗಾಡ್‌ನಲ್ಲಿ ಮೊಬೈಲ್ ಅಂಗಡಿ, ಮೆಡಿಕಲ್ ಸ್ಟೋರ್, ದೇವಾಲಯದಲ್ಲಿ ಕಳವು

0
109

ಹೊಸದುರ್ಗ: ಕಾಞಂಗಾಡ್ ಪರಿಸರದಲ್ಲಿ ಮತ್ತೆ ಕಳವು ಪ್ರಕರಣಗಳು ನಡೆದಿದ್ದು  ಜನರು ಆತಂಕಿತರಾಗಿದ್ದಾರೆ.  ಕಾಞಂಗಾಡ್ ಪೇಟೆಯಲ್ಲಿನ ಮೆಜಿಸ್ಟಿಕ್ ಮೊಬೈಲ್ ಅಂಗಡಿಯ ಶಟರ್ ಮುರಿದು ಒಳಗಿದ್ದ ೧೫ ಲಕ್ಷರೂ. ಬೆಲೆಯ ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್, ಇತರ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ. ನಿನ್ನೆಯಷ್ಟೇ  ಈ ಅಂಗಡಿಗೆ ಹೊಸ ಮೊಬೈಲ್ ತರಲಾಗಿತ್ತು.

 ಕೋಟಚ್ಚೇರಿ ಸೇವಾ ಸಹಕಾರಿ ಬ್ಯಾಂಕ್‌ನ ಆಶ್ರಯದಲ್ಲಿ ಅಲಾಮಿಪಳ್ಳಿಯಲ್ಲಿರುವ ನೀತಿ ಮೆಡಿಕಲ್ ಸ್ಟೋರ್‌ನ ಶಟರ್ ಮುರಿದು  ೭೦ ಸಾವಿರ ರೂ.ಗಳನ್ನು ದೋಚಲಾಗಿದೆ. ಈ ಮೆಡಿಕಲ್ ಸ್ಟೋರ್‌ನಲ್ಲಿ  ಹಗಲು ಸಂಗ್ರಹಿಸಲಾದ ಹಣವನ್ನು ಅಲ್ಲೇ ಇರಿಸುತ್ತಿದ್ದು, ಮರುದಿನ ಬೆಳಿಗ್ಗೆ  ಬ್ಯಾಂಕ್‌ಗೆ ಹಾಕಲಾಗುತ್ತಿತ್ತು. ಚೀಮೇನಿ ಮಯ್ಯಿಲ್ ಶ್ರೀ ಮಹಾವಿಷ್ಣು ಕ್ಷೇತ್ರದ ಒಳಗೆ ನುಗ್ಗಿದ ಕಳ್ಳರು ಗರ್ಭಗುಡಿಯ ಲ್ಲಿದ್ದ ಮುಕ್ಕಾಲು ಪವನ್ ಚಿನ್ನಾಭರಣ, ಬೆಳ್ಳಿಯ ಆಭರಣ ಎಂಬಿವುಗಳನ್ನು ದೋಚಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಞಂಗಾಡ್ ಪರಿಸರ ದಲ್ಲಿ ಕಳವು ಪ್ರಕರಣ ಹೆಚ್ಚುತ್ತಿವೆ. ಇದೀಗ ಊರಿಗೆ ಬಂದಿರುವ ಕಳವು ಆರೋಪಿ ಯೋ ರ್ವನ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY