ಮೆದುಳಿನಲ್ಲಿ ರಕ್ತಸ್ರಾವ ಮಹಿಳೆ ಮೃತ್ಯು

0
156

ಪೆರ್ಲ: ಮೆದುಳಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಸ್ವರ್ಗ ಬಳಿಯ ಮಲೆತ್ತಡ್ಕದ ನಾಟಿ ವೈದ್ಯ ಐತ್ತಪ್ಪ ನಾಯ್ಕರ ಪತ್ನಿ ಗೀತಾ (೫೩) ಮೃತಪಟ್ಟ ಮಹಿಳೆಯಾಗಿದ್ದಾರೆ. ನಿನ್ನೆ ಅವರು ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಕೊನೆಯುಸಿರೆಳೆದರು.

ಮೂರು ತಿಂಗಳ ಹಿಂದೆ ಗೀತಾರನ್ನು ಮೆದುಳಿನ ರಕ್ತ ಸ್ರಾವದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಮನೆಗೆ ಕರೆತಂದಿದ್ದರು. ಮೂರು ದಿನಗಳ ಹಿಂದೆ ಪುನಃ ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ  ಪರಿಯಾರಂ ಮೆಡಿ ಕಲ್ ಕಾಲೇಜಿನಲ್ಲಿ ದಾಖಲಿಸಲಾಗಿತ್ತು.

ಮೃತರು ತಂದೆ ಅಪ್ಪಯ್ಯ ನಾಯ್ಕ, ತಾಯಿ ಸೀತಮ್ಮ, ಮಕ್ಕಳಾದ ಕಾವ್ಯಶ್ರೀ, ಶಶಿಕುಮಾರ್, ಅಳಿಯ ಕೃಷ್ಣ ಕುಮಾರ್, ಸಹೋದರ-ಸಹೋದರಿಯರಾದ ಈಶ್ವರ ನಾಯ್ಕ, ಕೃಷ್ಣ, ಸಾವಿತ್ರಿ, ಗೋಪಿ, ಭವಾನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY