ಬೀದಿ ನಾಯಿಗಳನ್ನು ಕೊಂದು ವಾಹನದಲ್ಲಿ ಸಾಗಾಟ: ಪೊಲೀಸ್ ತನಿಖೆ ಆರಂಭ

0
99

ಕೊಚ್ಚಿ: ಬೀದಿ ನಾಯಿಗಳನ್ನು ಕೊಂದು ವಾಹನದಲ್ಲಿ ಕೊಂಡೊ ಯ್ಯುತ್ತಿದ್ದ ಘಟನೆ ಇಲ್ಲಿನ ತೃಕ್ಕಾಕರ ನಗರಸಭಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೂರು ಮಂದಿಯ ತಂಡ ಬೀದಿ ನಾಯಿಗಳನ್ನು ಕೊಂದು ಮೃತದೇಹಗಳನ್ನು ವಾಹನದಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯ ಬಹಿರಂಗಗೊಂಡಿದೆ. ಸಿ.ಸಿ ಕ್ಯಾಮರಾ ಮೂಲಕ ಸೆರೆಹಿಡಿದ ದೃಶ್ಯ ಇದೀಗ ಬಹಿರಂಗಗೊಂಡಿದ್ದು, ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ತಮಿಳು ನಾಡಿನ ನಿವಾಸಿಗಳಾದ ಮೂರು ಮಂದಿ ಬೀದಿ ನಾಯಿಗಳನ್ನು ಕೊಂದು ವಾಹನದಲ್ಲಿ ಸಾಗಿಸುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ನಾಯಿಗಳನ್ನು ಕೊಲ್ಲುವ, ಮೃತದೇಹಗಳನ್ನು  ವಾಹನದಲ್ಲಿ ಕೊಂಡೊಯ್ಯುವ ದೃಶ್ಯದ ವೀಡಿಯೋ ಪೊಲೀಸರು ಸಂಗ್ರಹಿಸಿದ್ದಾರೆ.

ಬೀದಿ ನಾಯಿಗಳನ್ನು ಕೊಲ್ಲಲು ಕಾರಣವೇನೆಂದು ತಿಳಿದುಬಂದಿಲ್ಲ. ಯಾವುದಾದರೂ ಹೋಟೆಲ್‌ಗಳಲ್ಲಿ ಮಾಂಸ ಮಾಡಲು ಬೀದಿ  ನಾಯಿಗಳನ್ನು ಕೊಲ್ಲಲಾಗುತ್ತಿದೆಯೇ ಎಂಬ ಬಗ್ಗೆಯೂ ಶಂಕೆ ಉಂಟಾಗಿದೆ.

ಇದೇ ವೇಳೆ ಬೀದಿ ನಾಯಿಗಳನ್ನು ಕೊಲ್ಲಲು ತಾವು ಯಾರಿಗೂ ಅನುಮತಿ ನೀಡಿಲ್ಲ ಎಂದು ತೃಕ್ಕಾಕರ ನಗರಸಭಾ ಅಧಿಕಾರಿಗಳು  ಹೇಳಿದ್ದಾರೆ. ಹಾಗಿದ್ದಲ್ಲಿ ಅನುಮತಿ ಪಡೆಯದೆ ನಾಯಿಗಳನ್ನು ಕೊಂದು ಮೃತ ದೇಹಗಳನ್ನು ಕೊಂಡೊಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ.

ನಾಯಿಗಳ ಮೃತದೇಹ ಕೊಂಡೊಯ್ದ ವಾಹನದ ನಂಬ್ರ ಲಭಿಸಿದೆಯೆಂದು ಪೊಲೀಸರು ಹೇಳಿದ್ದಾರೆ. ಕೆಲವೊಂದು ಮಾಂಸದ ಹೋಟೆಲ್‌ಗಳಲ್ಲಿ ನಾಯಿ ಮಾಂಸ ನೀಡಲಾಗುತ್ತಿದೆಯೆಂಬ ವರದಿ ಈ ಹಿಂದೆ ಉಂಟಾಗಿತ್ತು.

NO COMMENTS

LEAVE A REPLY