ವಿವಿಧೆಡೆ ಬಿ.ಎಂ.ಎಸ್ ಸ್ಥಾಪನಾ ದಿನಾಚರಣೆ

0
98

ಮಂಜೇಶ್ವರ: ಭಾರತೀಯ ಮಜ್ದೂರ್ ಸಂಘ್ (ಬಿ.ಎಂ.ಎಸ್) ನ ಸ್ಥಾಪನಾ ದಿನಾಚರಣೆಯಂಗವಾಗಿ ವಿವಿಧೆಡೆಗಳಲ್ಲಿ ಇಂದು ಧ್ವಜಾರೋ ಹಣ ನಡೆಸಲಾಯಿತು. ಬಿ.ಎಂ.ಎಸ್ ಮಂಜೇಶ್ವರ ವಲಯ ಸಮಿತಿ ಅಶ್ರಯದಲ್ಲಿ ಹೊಸಂಗಡಿಯಲ್ಲಿರುವ ಕಚೇರಿ ಮುಂದೆ ಬಿ.ಎಂ.ಎಸ್ ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್  ಬಂ ಬ್ರಾಣ ಧ್ವಜಾರೋಹಣ ನಡೆಸಿದರು. ವಲಯ ಅಧ್ಯಕ್ಷ ಬಿ.ಎಂ. ಭಾಸ್ಕರ ಅಧ್ಯಕ್ಷತೆ ವಹಿಸಿದರು. ದಿನೇಶ್ ಬಂದ್ಯೋಡು, ಪ್ರಕಾಶ್.ಕೆ.ಪಿ, ಕೃಷ್ಣ ಬೆಜ್ಜ, ಲೋಹಿತ್ ಮಜಿಬೈಲುಕಟ್ಟೆ, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.

ಕಣ್ವತೀರ್ಥ ಜಂಕ್ಷನ್‌ನಲ್ಲಿ ಶಿವರಾಜ್ ಧ್ವಜಾರೋಹಣ ನಡೆಸಿ ದರು. ಕುಂಜತ್ತೂರಿನಲ್ಲಿ ರವಿ ಮಜಲ್, ಉದ್ಯಾವರ ಮಾಡದಲ್ಲಿ ಯತೀಶ್,  ಹೊಸಂಗಡಿಯಲ್ಲಿ ಶ್ರೀಧರ ಬಿ.ಎಂ, ತಲಪಾಡಿಯಲ್ಲಿ ಹರೀಶ್, ವರ್ಕಾಡಿ ಸುಂಕದಕಟ್ಟೆಯಲ್ಲಿ ಭಾಸ್ಕರ ಪೊಯ್ಯೆ, ಕೋಳ್ಯೂರಿನಲ್ಲಿ ರವಿ ಕೋಳ್ಯೂರು, ಮೊರತ್ತಣೆಯಲ್ಲಿ ಅರುಣ್ ಎಂಬವರು ಧ್ವಜಾರೋಹಣ ನಡೆಸಿದರು.

NO COMMENTS

LEAVE A REPLY