ಕೃಷಿ ನಾಶಗೈಯ್ಯುವ ಕಾಡು ಹಂದಿಗಳ ನಿಗ್ರಹಕ್ಕೆ ಅನುಮತಿ ನೀಡಬೇಕು- ಹೈಕೋರ್ಟ್

0
99

ಕೊಚ್ಚಿ: ಕೃಷಿ ವಲಯಕ್ಕೆ ಆಗಮಿಸಿ ಬೆಳೆ ನಾಶಗೈಯ್ಯುವ ಕಾಡು ಹಂದಿಗಳನ್ನು ಕೊಲ್ಲಲು  ಅನುಮತಿ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಪತ್ತನಂತಿಟ್ಟ, ಮಲಪ್ಪುರಂ, ಕಲ್ಲಿಕೋಟೆ ಜಿಲ್ಲೆಗಳ ಕೃಷಿಕರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ. ಕಾಡು ಹಂದಿ ಹಾವಳಿ ಇರುವ ಪ್ರದೇಶಗಳಲ್ಲಿ, ಅವುಗಳನ್ನು ಹತ್ಯೆಗೈಯ್ಯಲು ಸಂಬಂಧಪಟ್ಟವರು ಅನುಮತಿ ನೀಡಬೇಕು ಎಂದು ನ್ಯಾಯಾಧೀಶ ಪಿ.ಬಿ. ಸುರೇಶ್ ಕುಮಾರ್ ತೀರ್ಪು ನೀಡಿದ್ದಾರೆ. ಒಂದು ತಿಂಗಳೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಹೇಳಲಾಗಿದೆ.

೨೦೧೧ರಿಂದಲೇ ಕೃಷಿಕರು ಈ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಆದರೆ ರಾಜ್ಯ ಕೇಂದ್ರ ಸರಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಜೀವ ಹಾಗೂ ಸೊತ್ತಿಗೆ ಸರಕಾರ ಸಂರಕ್ಷಣೆ ನೀಡಬೇಕಾಗದೆಯೆಂದು ಹೈಕೋರ್ಟ್ ಹೇಳಿದೆ.

ಕಾಸರಗೋಡು ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆ ಕಾಡು ಹಂದಿ ಹಾವಳಿ ವಿಪರೀತಗೊಂಡಿದೆ. ಆದರೆ  ರಾಜ್ಯ ಅರಣ್ಯ ಕಾನೂನು ಪ್ರಕಾರ ಕಾಡು ಹಂದಿಗಳನ್ನು ಕೊಲ್ಲುವಂತಿಲ್ಲ. ಕಾಡು ಹಂದಿಯ ಆಕ್ರಮಣದಿಂದ ನೀರ್ಚಾಲು, ಕುಂಬ್ಡಾಜೆ ಎಂಬೆಡೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡ ಪ್ರಕರಣಗಳೂ ನಡೆದಿದೆ. ಕಾಡಾನೆ ಹಾವಳಿ, ಕಾಡುಕೋಣ ಹಾವಳಿಯ ಜತೆಗೆ ವಿವಿಧೆಡೆ ಕಾಡು ಹಂದಿ ಹಾವಳಿಯೂ ವ್ಯಾಪಕಗೊಂಡಿದೆಯೆಂದು ದೂರುಂಟಾಗಿದೆ. ವಿವಿಧೆಡೆ ಭತ್ತ ಕೃಷಿಯನ್ನು ಕೂಡಾ ನಾಶಮಾಡುತ್ತಿವೆಯೆನ್ನಲಾಗಿದೆ.

NO COMMENTS

LEAVE A REPLY