ಕೋವಿಡ್ ತಗಲಿದ್ದ ನಾಗಸ್ವರ ವಾದಕ ಹೃದಯಾಘಾತದಿಂದ ನಿಧನ

0
97

ಅಡ್ಯನಡ್ಕ: ಇಲ್ಲಿಗೆ ಸಮೀಪದ ಸಾಂತಪದವು ನಿವಾಸಿ ದೈವ ಕೋಲ ಗಳಲ್ಲಿ ನಾಗಸ್ವರ ವಾದಕರಾಗಿದ್ದ ಗುರುವ (೫೯) ನಿಧನಹೊಂದಿದರು. ಸಾಂತಪದವು ಮೊಗೇರ್ಕಳ ಮುಕಾಂಬಿ ಗುಳಿಗ ದೈವಸ್ಥಾನದ ಮುಖ್ಯಸ್ಥರಾಗಿದ್ದರು. ಶೀತ, ಜ್ವರದ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಪರಿಶೀಲಿಸಿದಾಗ ಕೋ ವಿಡ್ ಪಾಸಿಟಿವ್ ಆಗಿತ್ತು.  ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ನಿಧನಹೊಂದಿದ್ದಾರೆ.

ಮೃತರು ಪತ್ನಿ ಲೀಲಾ, ಮಕ್ಕಳಾದ  ಉದಯ ಸಾರಂಗ್ (ನಾಟಕ ನಿರ್ದೇಶಕ), ಜಯಾ, ವಿಜಯ, ಸೊಸೆಯಂದಿರಾದ ಪೂರ್ಣಿಮಾ, ಚೇತನ, ಅಳಿಯ ವಿಜಯ ಬಾರಡ್ಕ ಹಾಗೂ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ.  ಕೋವಿಡ್ ಮಾನ ದಂಡದಂತೆ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಯಿತು.

NO COMMENTS

LEAVE A REPLY