ನಿಯಂತ್ರಣ ತಪ್ಪಿದ ಲಾರಿ ಸೇತುವೆಯ ತಡೆಗೋಡೆಗೆ ಢಿಕ್ಕಿ: ಚಾಲಕನಿಗೆ ಗಾಯ

0
119

ಮಂಜೇಶ್ವರ: ನಿಯಂತ್ರಣ ತಪ್ಪಿದ ಲಾರಿ ಸೇತುವೆಯ ಬದಿಗೆ ಢಿಕ್ಕಿ ಹೊಡೆದು ಚಾಲಕ ಗಾಯಗೊಂಡ ಘಟನೆ ನಡೆದಿದೆ. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ವಾಮಂ ಜೂರು ಚೆಕ್‌ಪೋಸ್ಟ್ ಬಳಿಯ ಸೇತುವೆಯಲ್ಲಿ ಅಪಘಾತ ಉಂಟಾಗಿದೆ. ಗಾಯಗೊಂಡ ಲಾರಿ ಚಾಲಕ ತಮಿಳುನಾಡು ನಾಲೂರು ನಿವಾಸಿ ತ್ಯಾಗರಾಜ್ (೪೮)   ಮಂಜೇಶ್ವರ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದಾರೆ.

ತಮಿಳುನಾಡು ಸೇಲಂನಿಂದ  ಡಾಮರು ಹೇರಿ ಕಾಸರಗೋಡು ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ. ಹೈವೇ ಪೊಲೀಸರು ಆಗಮಿಸಿ ವಾಹನ ಸಂಚಾರ ನಿಯಂತ್ರಿಸಿದರು.

NO COMMENTS

LEAVE A REPLY