ಕಾಞಂಗಾಡ್‌ನಲ್ಲಿ ಸರಣಿ ಕಳವು: ಕುಖ್ಯಾತ ಕಳವು ಆರೋಪಿ ಬಂಧನ

0
107

ಕಾಸರಗೋಡು: ಕಾಞಂಗಾಡ್ ನಗರದಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂಬ ಸಂಶಯದ ಮೇರೆಗೆ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಎದುರ್ತೋ ಡಿನ ಮುಹಮ್ಮದ್ ಶರೀಫ್ (೩೫) ಎಂಬಾತನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಪೊಲೀ ಸರು ಗಸ್ತು ತಿರುಗುತ್ತಿದ್ದಾಗಈತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಈತ ಸಂಶಯಾಸ್ಪದ ರೀತಿಯಲ್ಲಿ ಆಟೋರಿಕ್ಷಾ ಚಲಾಯಿಸುತ್ತಿದ್ದಾನೆಂದೂ ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೈಯಿಂದ ಕೆಲವು ಹೊಸ ಫೋನ್‌ಗಳು, ಹಲವು ಹಳೆಯ ಫೋನ್‌ಗಳನ್ನು ವಶಪಡಿಸಲಾ ಗಿದೆ. ಆಟೋರಿಕ್ಷಾವನ್ನು ಕೂಡಾ ವಶಕ್ಕೆ ತೆಗೆಯಲಾಗಿದೆ. ಕಾಞಂಗಾಡ್ ನಗರದಲ್ಲಿ ತ್ತೀಚೆಗೆ ನಡೆದ ಕಳವಿನಲ್ಲಿ ಈತ ಭಾಗಿಯಾಗಿದ್ದಾನೆಂದು ಖಚಿತ ಪಡಿಸಲಾಗಿದೆ. ಅಲ್ಲಿಂದ ಕಳವಿಗೀಡಾದ ಫೋನ್‌ಗಳನ್ನು ಆರೋಪಿಯಿಂದ ಕಸ್ಟಡಿಗೆ ತೆಗೆಯಲಾಗಿದೆ.

ಈತನ ವಿರುದ್ಧ ಬದಿಯಡ್ಕ, ಮಂಜೇಶ್ವವರ, ಕುಂಬಳೆ, ಕಾಸರಗೋಡು ಪೊಲೀಸ್ ಠಾಣೆಗಳಲ್ಲೂ ಹಲವು ಕಳವು ಪ್ರಕರಣಗಳಿವೆಯೆಂದೂ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಮುಹಮ್ಮದ್ ಶರೀಫ್ ಒಳಗೊಂಡ ಕುಖ್ಯಾತ ಕಳವು ತಂಡದ ಮುಖ್ಯಸ್ಥನನ್ನು ಪತ್ತೆಹಚ್ಚಲು ಹೊಸದುರ್ಗ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರ ಮನೆ ಸಹಿತ ವಿವಿಧೆಡೆ ಇದೇ ತಂಡ ಕಳವು ನಡೆಸಿದೆಯೆಂದು ಪೊಲೀಸರು ಸಂಶಯಿಸುತ್ತಿದ್ದಾರೆ.

NO COMMENTS

LEAVE A REPLY