ಕಡಲಕಿನಾರೆ ಸಂರಕ್ಷಣೆಗೆ ಸರಕಾರದಿಂದ ಕ್ರಮ- ಸಚಿವ

0
103

ಮಂಜೇಶ್ವರ:  ಕಾಸರಗೋಡಿನ ಬಂದರು ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ೬೬ ಕೋಟಿ ರೂಪಾಯಿ ಮಂಜೂರು ಮಾಡಲಾಗುವುದೆಂದು ರಾಜ್ಯ ಮೀನುಗಾರಿಕಾ ಖಾತೆ ಸಚಿವ ಸಚಿ ಚೆರಿಯಾನ್ ತಿಳಿಸಿದರು.  ಅವರು ಇಂದು ಬೆಳಿಗ್ಗೆ ಜಿಲ್ಲೆಯ ಮಂಜೇಶ್ವರ ಸಹಿತ ವಿವಿಧ ಕಡೆಗಳ ಮೀನುಗಾರಿಕಾ ಬಂದರುಗಳಿಗೆ ಭೇಟಿ ನೀಡಿ ಈ  ಬಗ್ಗೆ ತಿಳಿಸಿದ್ದಾರೆ. ಕಡಲಕಿನಾರೆ ಸಂರಕ್ಷಣೆಗೆ ಸರಕಾರ ತುರ್ತು ಕ್ರಮ ಕೈಗೊಳ್ಳಲಿದೆ.  ಮೀನು ಕಾರ್ಮಿಕರ ಆತಂಕ ಪರಿಹರಿಸಲಾಗುವುದೆಂದೂ ಸಚಿವ ತಿಳಿಸಿದರು.  ಸಚಿವರು ಮಂಜೇಶ್ವರ ಬಂದರಿಗೆ   ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳನ್ನು ಪರಿಶೀಲಿಸಿ ಕಾಮಗಾರಿ  ಶೀಘ್ರ ಪೂರ್ತಿಗೊಳಿ ಸುವುದಾಗಿಯೂ   ತಿಳಿಸಿದರು. ಇತ್ತೀಚೆಗೆ ಮೀನುಗಾರಿಕೆ ವೇಳೆ ಮೃತಪಟ್ಟ ಕಾಸರಗೋಡು  ಕಸಬ ಕಡಪ್ಪುರ ಪರಿಸರದ ಮೂರು ಮಂದಿಯ ಮನೆಗಳಿಗೂ ಸಚಿವ ಭೇಟಿ ನೀಡಿ ಕುಟುಂಬಗಳನ್ನು ಸಂತೈಸಿದರು. ಸಚಿವರ ಜತೆಗೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ. ಅಶ್ರಫ್, ಸಿ.ಎಚ್. ಕುಂಞಂಬು, ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಚೀಫ್ ಇಂಜಿನಿಯರ್ ಜೋಮೋನ್ ಜೋರ್ಜ್, ಸುಪರಿಂಟೆಂಡೆಂಟ್ ಇಂಜಿನಿಯರ್ ಕುಂಞಿ ಮಮ್ಮು ಪಿರವತ್ ಮೊದಲಾದವರಿದ್ದರು.

NO COMMENTS

LEAVE A REPLY