ಪೆರ್ಲದ ಯುವಕನ ಅಪಹರಣ ಪ್ರಕರಣ: ಓರ್ವ ಸೆರೆ

0
128

ಪೆರ್ಲ: ಯುವಕನನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿದ ಪ್ರಕರಣದಲ್ಲಿ ೫ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಲ  ಚೆಕ್‌ಪೋಸ್ಟ್ ಬಳಿಯ ಅಬ್ಬಾಸ್ (೨೫)ನನ್ನು ಅಪಹರಿಸಿ ಥಳಿಸಿದ ಪ್ರಕರಣದಲ್ಲಿ ಬಣ್ಪುತ್ತಡ್ಕ ನಿವಾಸಿ ಸಲ್ಲು ಯಾನೆ ಸಲ್ ಸಬಿಲಿ (೨೩)ಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ರೌಡಿನಿಗ್ರಹದಳ ತಂಡ ಈತನನ್ನು ಬಂಧಿಸಿ ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಳೆದ ಎಪ್ರಿಲ್ ೧೧ರಂದು ಅಪಹರಣ ಪ್ರಕರಣ ನಡೆದಿತ್ತು. ರಾತ್ರಿ ೭ ಗಂಟೆಯ ವೇಳೆ ಮನೆಯಂಗಳದಲ್ಲಿ ನಿಂತಿದ್ದ ಅಬ್ಬಾಸ್‌ನನ್ನು ಕಾರಿನಲ್ಲಿ ಆಗಮಿಸಿದ ತಂಡ ಅಪಹರಿಸಿ ಹಲ್ಲೆಗೈದ ಅನಂತರ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿತ್ತು. ಈ ಪ್ರಕರಣದಲ್ಲಿ ಭಾಷ, ಅಮೀರ್, ಕೈಸ್ ಎಂಬಿವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಅಬ್ಬಾಸ್‌ನ ಸಹೋದರ ದುಬಾಯಲ್ಲಿ ಚಿನ್ನ ವ್ಯವಹಾರ ನಡೆಸಿ ಅನಂತರ ಊರಿಗೆ ಬಂದಿದ್ದರು. ಈ ಚಿನ್ನ ವಾರೀಸುದಾರರಿಗೆ ಸಿಗಲಿಲ್ಲ ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಪಹರಣ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY