ಮದ್ಯ, ಬೈಕ್ ವಶ: ಕೇಸು ದಾಖಲು

0
91

ಕುಂಬಳೆ: ಬೈಕ್‌ನಲ್ಲಿ ಕರ್ನಾಟಕ ಮದ್ಯವನ್ನು ಅನಧಿಕೃತವಾಗಿ ಸಾಗಿಸಿದ ಹಿನ್ನೆಲೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ಬೇಳ ನಿವಾಸಿ ಪ್ರಶಾಂತ್ ಡಿ’ಸೋಜಾನ ವಿರುದ್ಧ ಕೇಸು ದಾಖಲಿಸಿದ್ದಾರೆ. ಕುಂಬಳೆ ಸೀತಾಂಗೋಳಿ ರಸ್ತೆಯ ರಾಜೀವ್ ನಗರದಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ೩.೬ ಲೀಟರ್ ಮದ್ಯ, ಬೈಕನ್ನು ವಶಪಡಿ ಸಿದ್ದಾರೆ. ಆರೋಪಿ ಅಧಿಕಾರಿಗಳನ್ನು ಕಂಡು ಪರಾರಿಯಾಗಿದ್ದಾನೆ. ಕುಂಬಳೆ ರೇಂಜ್‌ನ ಪ್ರಿವೆಂಟಿವ್ ಆಫೀಸರ್ ಅಬ್ದುಲ್ ಬಶೀರ್, ಸಿಇಒಗಳಾದ ಹಮೀದ್, ಜೀಜಿತ್, ಶ್ರೀಜೇಶ್, ಸಾಬಿತ್, ಅಮಿತ್ ಕಾರ್ಯಾ ಚರಣೆ ನಡೆಸಿದ್ದರು.

NO COMMENTS

LEAVE A REPLY