ತಮಿಳುನಾಡಿಗೆ ಹೋದ ಉಕ್ಕಿನಡ್ಕ ನಿವಾಸಿ ನಾಪತ್ತೆ

0
181

ಉಕ್ಕಿನಡ್ಕ: ತಮಿಳುನಾಡಿಗೆ ಬೋರ್‌ವೆಲ್ ಲಾರಿ  ತರಲುಹೋದ ಉಕ್ಕಿನಡ್ಕ ನಿವಾಸಿ ನಾಪತ್ತೆಯಾದ ಘಟನೆ ನಡೆದಿದೆ. ಉಕ್ಕಿನಡ್ಕ ಕೃಷ್ಣ ನಿಲಯ ನಿವಾಸಿ ವಿನೋದ್ ಕುಮಾರ್ (೪೧) ನಾಪತ್ತೆಯಾದ ವ್ಯಕ್ತಿ. ಇವರು ಬೋರ್‌ವೆಲ್ ಏಜೆಂಟರಾಗಿದ್ದಾರೆ. ಜೂನ್ ೩೦ರಂದು ಇವರು ಬೋರ್‌ವೆಲ್ ಲಾರಿ ತರಲೆಂದು ತಮಿಳುನಾಡಿಗೆ ಹೋಗಿದ್ದರು. ಮರುದಿನ ಪುತ್ರಿಗೆ ಫೋನ್ ಮಾಡಿ ನಾಳೆಯೇ ಊರಿಗೆ ಹಿಂತಿರುಗುವುದಾಗಿ ಹೇಳಿದ್ದಾರೆ. ಅನಂತರ  ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ರೇಖಾ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY