ಪಾಲಕ್ಕಾಡ್: ಸಹಕಾರಿ ಬ್ಯಾಂಕ್‌ನಿಂದ ಏಳೂವರೆ ಕಿಲೋ ಚಿನ್ನ, ನಗದು ದರೋಡೆ

0
90

ಪಾಲಕ್ಕಾಡ್: ಪಾಲಕ್ಕಾಡ್‌ನಲ್ಲಿ ಸಹಕಾರಿ ಬ್ಯಾಂಕ್‌ನ ಬೀಗ ಮುರಿದು ಏಳೂವರೆ ಕಿಲೋ ಚಿನ್ನ ಹಾಗೂ ಹಣ ದರೋಡೆಗೈದ ಘಟನೆ ನಡೆದಿದೆ. ಪಾಲಕ್ಕಾಡ್ ಮರುದಕೋರ್ ರಸ್ತೆಯ ರೂರಲ್ ಕ್ರೆಡಿಟ್ ಸಹಕಾರಿ ಸಂಘದ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಾಕರ್‌ನ ಒಳಗಿದ್ದ ಏಳೂ ವರೆ ಕಿಲೋ ಚಿನ್ನ ಹಾಗೂ ೨೦ ಸಾವಿರ ರೂ. ಕಳವುಗೈಯ್ಯಲಾಗಿದೆ. ೭ ಮಂದಿಯ ತಂಡ ಈ ಕೃತ್ಯವೆಸಗಿರ ಬಹುದು ಎಂದು ಶಂಕಿಸಲಾಗಿದೆ.

ಶುಕ್ರವಾರ ಸಂಜೆ ಬ್ಯಾಂಕ್ ಬಾಗಿಲು  ಹಾಕಿ ಶೆಟರ್‌ಎಳೆದು ಬೀಗ ಹಾಕಲಾಗಿತ್ತು. ಅನಂತರ ಇಂದು ಬೆಳಿಗ್ಗೆ ಬಂದು ಬಾಗಿಲು ತೆರೆದಾಗ ದರೋಡೆ ಮಾಹಿತಿ ಬಹಿರಂಗಗೊಂಡಿದೆ. ಶುಕ್ರವಾರದಿಂದ ಇಂದು ಮುಂಜಾನೆಯ ಮೊದಲು ದರೋಡೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

NO COMMENTS

LEAVE A REPLY