ಕಾಞಂಗಾಡ್ ಸರಣಿ ಕಳ್ಳತನ ಕುಖ್ಯಾತ ಕಳ್ಳರ ಸೆರೆ

0
97

ಹೊಸದುರ್ಗ: ಕಾಞಂಗಾಡ್ ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿದ ಪ್ರಕರಣಧಲ್ಲಿ ಇಬ್ಬರು ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಕಳ್ಳರಾದ ಕಾರಾಟ್ ನೌಶಾದ್, ಟೋನಿ ಬಂಧಿತರು. ನೌಶಾದ್‌ನನ್ನು ಕುಂದಾಪುರದಿಂ ದಲೂ, ಟೋನಿಯನ್ನು ಕಾರವಾರದಿಂ ದಲೂ ಬಂಧಿಸಲಾಗಿದೆ. ಇವರ ಕೈಯಿಂದ ೫ ಲಕ್ಷ ರೂ. ಬೆಲೆಯ ಕಳವು ಸಾಮಗ್ರಿಗಳನ್ನು ವಶಪಡಿಸ ಲಾಗಿದೆ. ಈ ಪ್ರಕರಣದಲ್ಲಿ ಶರೀಫ್ ಎಂಬಾತನನ್ನು ಶನಿವಾರ ಬಂಧಿಸಲಾಗಿತ್ತು. ಕಾಞಂಗಾಡ್ ಪೇಟೆಯಲ್ಲಿ ಮೊಬೈಲ್ ಅಂಗಡಿ, ಮೆಡಿಕಲ್ ಅಂಗಡಿ ಸಹಿತ  ಕಳೆದೊಂದು ವಾರದಲ್ಲಿ ೧೦ ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳವುಗೈಯ್ಯಲಾಗಿತ್ತು.

ಬಂಧಿತ ಕಾರಾಟ್ ನೌಶಾದ್ ಜಿಲ್ಲೆಯಲ್ಲಿ ಹಲವು ಕಳವು, ದರೋಡೆ ಪ್ರಕರಣಗಳಲ್ಲಿ ಆರೋಪಿಯಾ ಗಿದ್ದಾನೆಂದು ತಿಳಿದುಬಂದಿದೆ. ಬಂಧಿತ ಟೋನಿ ಕಣ್ಣೂರು, ಕೊಚ್ಚಿ ಸಹಿತ ವಿವಿಧ ಕಡೆಗಳಲ್ಲಿ ಕಳವು ಪ್ರಕರಣಗಳಲ್ಲಿ ಆರೋಪಿ ಯಾಗಿ ದ್ದಾನೆಂದು ಪೊಲೀಸರು ಹೇಳಿದ್ದಾರೆ.

NO COMMENTS

LEAVE A REPLY