ರಾಜ್ಯದಲ್ಲಿ ಇನ್ನೂ ಹೆಚ್ಚಿದ ಕೋವಿಡ್ ಹರಡುವಿಕೆ: ನಿನ್ನೆ ೧೭,೪೬೬ ಮಂದಿಗೆ ರೋಗ

0
99

ಕಾಸರಗೋಡು: ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಡೀ ದೇಶದಲ್ಲಿರುವ ರೋಗ ಬಾಧಿತರ ಪೈಕಿ ಅರ್ಧದಷ್ಟು ಮಂದಿ ಕೇರಳದಲ್ಲಿದ್ದಾರೆ.  ರಾಜ್ಯದಲ್ಲಿ ನಿನ್ನೆಯೂ ಟಿಪಿಆರ್ ೧೨ಕ್ಕಿಂತ ಮೇಲಿದ್ದು, ಇದು  ಆತಂಕಕ್ಕೆ ಕಾರಣವಾಗಿದೆ. ನಿನ್ನೆ ೧೭,೪೬೬ ಮಂದಿಗೆ ಕೋವಿಡ್ ದೃಢೀಕರಿಸ ಲಾಗಿದೆ. ನಿನ್ನೆಯೂ ಟಿಪಿಆರ್ ೧೨.೩ ಶೇಕಡಾ ಆಗಿದೆ. ನಿನ್ನೆ ೬೬ ಮಂದಿಯ ಸಾವು ಖಚಿತಪಡಿಸಲಾಗಿದೆ.  ಇದರೊಂ ದಿಗೆ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ ೧೬,೦೩೫ಕ್ಕೇರಿದೆ.

ನಿನ್ನೆ ರೋಗ ಬಾಧಿತರ ಪೈಕಿ ೬೪ ಮಂದಿ ಆರೋಗ್ಯ ಕಾರ್ಯಕರ್ತ ರಾಗಿದ್ದಾರೆ. ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದವರ ಪೈಕಿ ೧೫,೨೪೭ ಮಂದಿ ನಿನ್ನೆ ರೋಗಮುಕ್ತರಾಗಿದ್ದಾರೆ. ೨೭೧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಟಿಪಿಆರ್ ೧೫ಕ್ಕೂ ಮೇಲಿದೆ.  ಕಾಸರಗೋಡಿನಲ್ಲಿ ನಿನ್ನೆ ೬೪೪ ಮಂದಿಗೆ ರೋಗ ದೃಢೀಕರಿಸಲಾಗಿದೆ. ಮಲಪ್ಪುರಂ ೨೬೮೪, ಕಲ್ಲಿಕೋಟೆ ೨೩೭೯, ತೃಶೂರು ೨೧೯೦, ಎರ್ನಾಕುಳಂ ೧೬೮೭, ಪಾಲಕ್ಕಾಡ್ ೧೫೫೨, ಕೊಲ್ಲಂ ೧೨೬೩, ತಿರುವನಂತಪುರ ೧೨೨೨, ಆಲಪ್ಪುಳ ೯೧೪, ಕಣ್ಣೂರು ೮೮೪, ಕೋಟ್ಟಯಂ ೮೩೩, ಪತ್ತನಂತಿಟ್ಟ ೪೭೮, ವಯನಾಡ್ ೩೮೩, ಇಡುಕ್ಕಿ ೩೫೩ ಎಂಬೀ ರೀತಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ನಿನ್ನೆ ರೋಗ ದೃಢೀಕರಿಸಲಾಗಿದೆ.

NO COMMENTS

LEAVE A REPLY