ಬಸ್ ಮಾಲಕರಿಂದ ಉಪವಾಸ ಸತ್ಯಾಗ್ರಹ

0
88

ಕಾಸರಗೋಡು: ರಾಜ್ಯದ ಖಾಸಗಿ ಬಸ್ ವಲಯವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಓಪರೇಟರ್ಸ್ ಫೆಡರೇಶನ್ ರಾಜ್ಯ ವ್ಯಾಪಕವಾಗಿ ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಸಾರ್ವಜನಿಕ ಸಂಚಾರ ಸಂರಕ್ಷಣೆಗೆ ರಾಜ್ಯ ಸರಕಾರ ಪ್ಯಾಕೇಜ್ ಘೋಷಿಸಬೇಕು, ಕೋವಿಡ್ ಸಮಯದ ರಸ್ತೆ ತೆರಿಗೆ ರದ್ದು ಪಡಿಸಬೇಕು,  ಸಾರ್ವಜನಿಕ ಸಂಚಾರದ ಡೀಸೆಲ್‌ಗೆ ಸಬ್ಸಿಡಿ ನೀಡಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಜಿಲ್ಲೆಯ ಹೊಸಂಗಡಿ, ಕಾಸರಗೋಡು ಚೆರ್ವತ್ತೂರು ಎಂಬೆಡೆಗಳಲ್ಲಿ  ಸತ್ಯಾಗ್ರಹ ನಡೆಯುತ್ತಿದೆ.

ಕಾಸರಗೋಡಿನಲ್ಲಿ ನಡೆದ ಸತ್ಯಾಗ್ರಹವನ್ನು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎ. ಅಹಮ್ಮದ್ ಶರೀಫ್ ಉದ್ಘಾಟಿಸಿದರು.  ಕಾಸರಗೋಡು ತಾಲೂಕು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಎಂ.ಎ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಪಿ.ಎ. ಮುಹಮ್ಮದ್ ಕುಂಞಿ, ಕೆ. ಗಿರೀಶ್, ಶರೀಫ್ ಕೊಡವಂಜಿ, ಎಸ್. ರಾಧಾಕೃಷ್ಣನ್ ಮೊದಲಾದವರು ನೇತೃತ್ವ ನೀಡಿದರು. ಹೊಸಂಗಡಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪಾವೂರು ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ತಿಮ್ಮಣ್ಣ ಭಟ್ ಅರಂತಾಡಿ ಅಧ್ಯಕ್ಷತೆ ವಹಿಸಿದರು. ಬಸ್ ಮಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಬ್ಬಣ್ಣ ಆಳ್ವ, ತಾಲೂಕು ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್, ಜನಪ್ರತಿನಿಧಿಗಳಾದ ಕೆ.ಆರ್. ಜಯಾನಂದ, ಬಿ.ಎಂ. ಆದರ್ಶ್, ಹರ್ಷಾದ್, ಎಸ್. ಹಮೀದ್, ಚಂದ್ರಹಾಸ, ಮುಸ್ತಫ, ಆರಿಫ್, ಖಲೀಲ್, ಬಿ.ಎಂ. ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

NO COMMENTS

LEAVE A REPLY