ಜಿಲ್ಲೆಯ ೩೨ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಂಶುಪಾಲರಿಲ್ಲ

0
78

ಕಾಸರಗೋಡು: ಜಿಲ್ಲೆಯ ೬೫ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ೩೨ರಲ್ಲೂ ಪ್ರಾಂಶುಪಾಲರಿಲ್ಲ.   ಶಿಕ್ಷಣ ಕೇಂದ್ರಗಳಲ್ಲಿ ಪ್ರಾಂಶುಪಾಲರಿಲ್ಲದೆ ಒಂದು ವರ್ಷ ಕಳೆದರೂ ನೇಮಕಾತಿ ಮಾತ್ರ ನಡೆದಿಲ್ಲ.

ಆನ್‌ಲೈನ್ ತರಗತಿಗಾಗಿ ವ್ಯಾಪಕ ಸಿದ್ಧತೆ ನಡೆಸುತ್ತಿರುವ ಈ ಕಾಲದಲ್ಲಿ ನಾಯಕನಿಲ್ಲದ ಹೈಯರ್ ಸೆಕೆಂಡರಿ ಶಾಲೆಗಳು ಪ್ರಶ್ನಾರ್ಥ ಚಿಹ್ನೆಯಾಗಿ ಮೂಡಿ ಬಂದಿದೆಯೆಂದು ಅಧ್ಯಾಪಕ ರು, ವಿದ್ಯಾರ್ಥಿಗಳು, ಹೆತ್ತವರು ಹೇಳುತ್ತಾರೆ.

ಬಹುತೇಕ ಪ್ರಾಂಶುಪಾಲರಿಗೆ, ಪಾಠ ಮಾಡುವ ಹೊಣೆಯೂ ಇದೆ. ಆದರೆ ಪ್ರಾಂಶುಪಾಲರಿಲ್ಲದ ಕಾರಣ ಆ ತರಗತಿ ನಡೆಸುವವರಿಲ್ಲ. ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪ್ರಾಂಶುಪಾಲರ ವರ್ಗಾವಣೆ, ಭಡ್ತಿ ಎಂಬಿವು ನಡೆ ಯುತ್ತಿದ್ದರೂ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಪ್ರಾಂಶುಪಾಲರ ನೇಮಕಾತಿ ವಿಷ ಯದಲ್ಲಿ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂ ನಲ್ ಹೊರಡಿಸಿದ ತೀರ್ಪಿನಿಂದಾಗಿ, ನೇಮಕಾತಿ ತಡವಾಗಲಿದೆಯೆಂದು ಅಧ್ಯಾಪಕರು ಹೇಳುತ್ತಾರೆ.ಈಗಿರುವ ಯೋಗ್ಯತೆ ಪ್ರಕಾರ ೧೨ ವರ್ಷ ಅಧ್ಯಾಪಕನ ಅನುಭವ ಹೊಂದಿದೆ. ಹೈಯರ್ ಸೆಕೆಂಡರಿ ಅಧ್ಯಾಪಕರಿಗೆ ೨:೧ ಎಂಬ  ರೀತಿಯಲ್ಲಿ ಭಡ್ತಿ ಲಭಿಸುತ್ತಿದೆ. ೨೦೦೫ರಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪಿಎಸ್‌ಸಿ ನೇಮಕಾತಿ ಆರಂಭವಾಗಿತ್ತು. ಇದೀಗ ೧೨ ವರ್ಷ ಪೂರ್ಣಗೊಳಿಸಿದ ಹಲವು ಅಧ್ಯಾಪಕರು ಸೇವೆಯಲ್ಲಿರುವಾಗ, ಪ್ರಾಂಶುಪಾಲ ಹುದ್ದೆಗೆ ಪ್ರತ್ಯೇಕ ನೇಮಕಾತಿ ಅಗತ್ಯವಿಲ್ಲ ಎಂಬ ಬೇಡಿಕೆಯೂ ಉಂಟಾಗಿದೆ. ರಾಜ್ಯದಲ್ಲಿ ಕೋವಿಡ್ ಹಿನ್ನೆಲೆ ಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಬರಲಾಗದಂತಹ ಸ್ಥಿತಿ ಉಂಟಾ ಗಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ತರಗತಿ ಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.

NO COMMENTS

LEAVE A REPLY