ಕಳವುಗೈದ ಬೈಕ್ ಸಹಿತ ಇಬ್ಬರ ಬಂಧನ

0
68

ಕಾಸರಗೋಡು:  ಕಳವುಗೈದ ಬೈಕ್ ಸಹಿತ ಇಬ್ಬರನ್ನು ಕಾಸರ ಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪಡು ವಡ್ಕ ನಿವಾಸಿಗಳಾದ ಅಹಮ್ಮದ್ ಅನ್ವರ್ (೨೩), ಮೆಹಮೂದ್ (೨೪) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರು ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಪೊಲೀಸರಿಗೆ ಸಂಶಯಗೊಂಡು ತಡೆದು ನಿಲ್ಲಿಸಿ ವಿಚಾರಿಸಿದಾಗ ಬೈಕ್ ಮೊಗ್ರಾಲ್ ನಿಂದ ಕಳವು ನಡೆಸಿರುವುದಾಗಿದೆ ಯೆಂದು ತಿಳಿದು ಬಂದಿದೆ. ಮೂರು ಮಂದಿ ಸೇರಿ ಮೊಗ್ರಾಲ್‌ನಿಂದ ಬೈಕ್ ಕಳವು ನಡೆಸಿದ್ದಾರೆ. ಈ ಪೈಕಿ ಇನ್ನೋರ್ವ ಆರೋಪಿಯನ್ನು ಸೆರೆ ಹಿಡಿಯಲು ಬಾಕಿಯಿದೆ. ಆತನ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಬಂಧಿತನನ್ನು ಪೊಲೀಸರು ಸಮಗ್ರ ತನಿಖೆಗೊಳ ಪಡಿಸಿದ್ದು, ಇವರು ಬೇರೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ದ್ದಾರೆಯೇ ಎಂದು ತಿಳಿಯಲು ಪ್ರಯತ್ನ ನಡೆಯುತ್ತಿದೆ.

NO COMMENTS

LEAVE A REPLY