೧೭೨೮ ಪ್ಯಾಕೆಟ್ ಕರ್ನಾಟಕ ಮದ್ಯ ವಶ: ಇಬ್ಬರ ಸೆರೆ

0
83

ಕಾಸರಗೋಡು: ರಾಜ್ಯ ಸರಕಾರದ ಮದ್ಯದಂಗಡಿಳು ತೆರೆದಿದ್ದರೂ ಜಿಲ್ಲೆಯಲ್ಲಿ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಮಾರಾಟ ವ್ಯಾಪಕಗೊಂಡಿದೆ. ವಿವಿಧೆಡೆಗಳಲ್ಲಿ ಕರ್ನಾಟಕ ನಿರ್ಮಿತ ವಿದೇಶ ಮದ್ಯಕ್ಕೆ ಬೇಡಿಕೆ ಹೆಚ್ಚಿದ್ದು, ಏಜೆಂಟರುಗಳು, ಮಾರಾಟಗಾರರು ಸಕ್ರಿಯರಾಗಿದ್ದಾರೆಂದು ತಿಳಿದುಬಂ ದಿದೆ. ನಿನ್ನೆ ಕಾಸರಗೋಡು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಜಿತ್ ಕುಮಾರ್ ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೧೭೨೮ ಪ್ಯಾಕೆಟ್  ಕರ್ನಾಟಕ ಮದ್ಯ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಸೂರಂಬೈಲು ನಿವಾಸಿ ಸುಬ್ರಹ್ಮಣ್ಯ (೨೩), ಮೊಗ್ರಾಲ್ ನಿವಾಸಿ ಮುಸಾಮಿಲ್ (೨೮) ಬಂಧಿತ ಆರೋಪಿಗಳು. ಇವರು ಕಾಸರಗೋಡು ಸಹಿತ ವಿವಿಧ ಕಡೆಗಳಿಗೆ ಮದ್ಯ ಪೂರೈಸುತ್ತಿದ್ದರೆಂದು ತಿಳಿದುಬಂದಿದೆ.

NO COMMENTS

LEAVE A REPLY