ರೈಲಿನಿಂದ ಹೊರಕ್ಕೆಸೆಯಲ್ಪಟ್ಟ ವಿದ್ಯಾರ್ಥಿನಿ ಗಂಭೀರ

0
112

ಕಾಸರಗೋಡು: ರೈಲು ಪ್ರಯಾ ಣಿಕೆಯಾದ ವಿದ್ಯಾರ್ಥಿನಿ, ಪ್ರಯಾಣದ ಮಧ್ಯೆ ಹೊರಕ್ಕೆಸೆಯಲ್ಪಟ್ಟ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಎರ್ನಾಕುಳಂ ನಿವಾಸಿ ಮೆರಿನ್ ಸಂತೋಷ್ (೧೯)ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಕುಂಬಳೆ ಉಪ್ಪಳ ಮಧ್ಯೆ ಶಿರಿಯ ಮುಟ್ಟಂ ಬಳಿ ಈ ಘಟನೆ ನಡೆದಿದೆ.

ಈಕೆಯ ಜತೆಗಿದ್ದವರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು, ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದರು. ಅನಂತರ ನಡೆದ ತಪಾಸಣೆಯಲ್ಲಿ ಮೆರಿನ್, ಮೂರ್ಛೆ ತಪ್ಪಿ ಬಿದ್ದಿರುವುದು ಕಂಡು ಬಂತು. ಕೂಡಲೇ ಆಕೆಯನ್ನು ಕುಂಬಳೆ ಆಸ್ಪತ್ರೆಗೆ, ಅನಂತರ ಮಂಗಳೂರು ಆಸ್ಪತ್ರೆಗೂ ಕೊಂಡೊಯ್ಯ ಲಾಯಿತು. ಈಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ವರ್ಷ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಊರಿನಿಂದ ರೈಲಿನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಬೆಳಿಗ್ಗೆ ಸೀಟಿನಿಂದ ಎದ್ದು ಮುಖ ತೊಳೆಯಲು ನಡೆಯು ತ್ತಿದ್ದಾಗ ಹೊರಕ್ಕೆಸೆಯಲ್ಪಟ್ಟಿರುವುದಾಗಿ ತಿಳಿದು ಬಂದಿದೆ.

NO COMMENTS

LEAVE A REPLY