ಮನೆ ನಿರ್ಮಾಣ ಹೆಸರಿನಲ್ಲಿ ೨೦ ಲಕ್ಷ ರೂ. ಪಡೆದು ವಂಚನೆ: ಮೂವರ ವಿರುದ್ಧ ಕೇಸು

0
110

ವಿದ್ಯಾನಗರ: ಮನೆ ನಿರ್ಮಿಸಿಕೊಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಮಹಿಳೆಯ ದೂರಿನಂತೆ ಮೂರು ಮಂದಿಯ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೆಳಗಿನ ನಾಯಮ್ಮಾರ್‌ಮೂಲೆಯ ಬೀಫಾತಿಮ್ಮ (೪೯) ನೀಡಿದ ದೂರಿನಂತೆ ನೌಶಾದ್, ಮುಹಮ್ಮದ್ ಸತ್ತಾರ್, ಸಾಜಿದಾ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಿಗಳಲ್ಲಿ ನೌಶಾದ್ ಹಾಗೂ ಸಾಜಿದಾ ಸಂಬಂಧಿಕರಾಗಿದ್ದಾರೆ. ಬೀಫಾತಿಮ್ಮ ಅವರಿಗೆ ಮನೆ ನಿರ್ಮಿಸಲು ನೌಶಾದ್ ಹಾಗೂ ಇತರ ಆರೋಪಿಗಳ ಜತೆ ಒಪ್ಪಂದ ಮಾಡಿದ್ದರು. ಅದರಂತೆ ಮುಟ್ಟತ್ತೋಡಿ ವಿಲೇಜ್‌ನ ಬಾಫಾಕಿನಗರದಲ್ಲಿ ೨೮ ಲಕ್ಷ ರೂ. ಖರ್ಚಿನ ಮನೆ ನಿರ್ಮಿಸಲು ಒಪ್ಪಂದ ಮಾಡಲಾಗಿತ್ತು. ಒಪ್ಪಂದದಂತೆ ೨೦೨೦ ಮಾರ್ಚ್ ೧೮ರಂದು ೫ ಲಕ್ಷ, ಅಕ್ಟೋಬರ್ ೯ರಂದು ೧೫ ಲಕ್ಷ ರೂ. ನೀಡಲಾಗಿತ್ತು. ಆದರೆ ಮನೆಯಾಗಲೀ ನೀಡಿದ ಹಣವಾಗಲೀ ಬೀಫಾತಿಮ್ಮರಿಗೆ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅಂತಹಾ ಯಾವುದೇ ಮನೆ ನಿರ್ಮಾಣ ನಡೆದಿಲ್ಲ ಎಂದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಬೀಫಾತಿಮ್ಮ ಅವರು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇಂತಹಾ ಸ್ಥಳವಾಗಲೀ, ಮನೆಯಾಗಲೀ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY