ಮದ್ರಸಾ ಹೆಸರಲ್ಲಿ ಅನಧಿಕೃತ ದೇಣಿಗೆ ಸಂಗ್ರಹ: ಅಧ್ಯಾಪಕ ಸೆರೆ

0
41

ಕಾಸರಗೋಡು: ಮದ್ರಸಾಗಳ ಹೆಸರಲ್ಲಿ ಅನಧಿಕೃತವಾಗಿ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿದ ದೂರಿ ನಂತೆ ಮದ್ರಸಾ ಅಧ್ಯಾಪಕನೋರ್ವ ನನ್ನು ವಾಳುಕೋಟಾ ಪೊಲೀಸರು ಬಂಧಿಸಿದ್ದಾರೆ.

ನೀಲಗಿರಿ ಪಂದಲ್ಲೂರು ನಿವಾಸಿ ಪುದಿಯೇಡತ್ ಅಬ್ದುಲ್ ರಜಾಕ್ ಮುಸ್ಲಿಯಾರ್(೫೩) ಬಂಧಿತನಾದ ಅಧ್ಯಾಪಕನಾಗಿದ್ದಾನೆ. ಈತ ಹತ್ತು ವರ್ಷಗಳ ಹಿಂದೆ ಮದ್ರಸಾ ಅಧ್ಯಾಪಕ ನಾಗಿ ಸೇವೆ ಸಲ್ಲಿಸುತ್ತಿದ್ದ ಬಳಿಕ ಆ ಕೆಲಸ ಬಿಟ್ಟಿದ್ದನು.  ಅಧ್ಯಾಪಕ ಕೆಲಸ ತೊರೆದಿದ್ದರೂ ಆತ ಬಳಿಕ ಕಾಸರ ಗೋಡು, ಕಣ್ಣೂರು, ಕಲ್ಲಿಕೋಟೆ ಮೊದಲಾದ ಜಿಲ್ಲೆಗಳಲ್ಲಿ ಮದ್ರಸಾಗಳ ಹೆಸರಲ್ಲಿ ಅನಧಿಕೃತವಾಗಿ ಹಣ ಸಂಗ್ರ ಹಿಸುತ್ತಿದ್ದನೆಂದು  ದೂರು ಲಭಿಸಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೇಸು ದಾಖಲಿಸಿ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ.

ಸೂಫಿ ಇ.ಕೆ ಮತ್ತು ಎ.ಪಿ. ವಿಭಾಗಗಳು ನಡೆಸುತ್ತಿರುವ ಮದ್ರಸಾಗಳ ಹೆಸರಲ್ಲೇ ಈತ ಹೆಚ್ಚಾಗಿ  ಹಣ ಸಂಗ್ರಹಿಸುತ್ತಿದ್ದನು. ಹಣ ದೇಣಿಗೆ ಪಡೆಯಲು ಹಲವು ನಕಲಿ ದಾಖಲು ಪತ್ರಗಳನ್ನು ತಯಾರಿಸಿ ದ್ದನು. ಈತನ ಕೈಯಿಂದ ನಿರ್ಮಾಣ ಹಂತದಲ್ಲಿರುವ  ಹಲವು ಮದ್ರಸಾ ಕಟ್ಟಡಗಳ ಫೊಟೋಗಳು, ಮದ್ರಸಾ ಸಮಿತಿಯ ಹೆಸರಲ್ಲಿ ಸ್ವಂತವಾಗಿ ತಯಾರಿಸಲಾದ ಗುರುತು ಪತ್ರ, ಪಾನ್ ಕಾರ್ಡ್, ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾರ ಫೊಟೋ ಒಳಗೊಂಡ ಕಾರ್ಡ್ ಇತ್ಯಾದಿಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಆತನ ಕೈಯಲ್ಲಿದ್ದ ೨೩೦೦೦ರೂ. ಹಣವನ್ನು ವಶಪಡಿಸಲಾ ಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY