ಚುನಾವಣಾ ಬಾಂಡ್‌ಗಳ ಮೂಲಕ ಪಡೆದ  ದೇಣಿಗೆ ವಿವರ ಸಲ್ಲಿಸಲು ಇಂದು ಕೊನೆ ದಿನ

ನವದೆಹಲಿ: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಎಲ್ಲಾ ದೇಣಿಗಳ ಪೂರ್ಣ ವಿವರಗಳನ್ನು ನವಂಬರ್ ೧೫ರೊಳಗಾಗಿ ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೆ ನಿರ್ದೇಶ ನೀಡಿದೆ.

೨೦೨೩ ಸೆಪ್ಟಂಬರ್ ೩೦ರ ವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಸ್ವೀಕರಿಸಿದ ನಿಧಿಯ ಅಪ್ ಟು ಡೇಟ್‌ನ್ನು ಪ್ರಸ್ತು ತಪಡಿಸುವಂತೆ ಸುಪ್ರೀಂಕೋರ್ಟ್ ನವಂಬರ್ ೨ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಅದರಂತೆ ಆಯೋಗ ರಾಜಕೀಯ ಪಕ್ಷಗಳಿಗೆ ಈ ಹೊಸ ನಿರ್ದೇಶ ನೀಡಿದೆ.

ಚುನಾವಣಾ ಬಾಂಡ್‌ನ ವಿರುದ್ಧ ದಾನಿಗಳು ಆರ್ಥಿಕ ನೆರವು ನೀಡಿದ್ದಲ್ಲಿ ಆ ಕುರಿತಾದ ಪೂರ್ಣ ವರದಿ ಹಾಗೂ ಅಂತಹ ದಾನಿಗಳ ವಿವರಗಳನ್ನು ಸಲ್ಲಿಸಬೇಕು. ಪ್ರತಿ ಬಾಂಡ್‌ನ ಮೊತ್ತ ಮತ್ತು ಪ್ರತೀ ಬಾಂಡ್ ವಿರುದ್ಧ ಪಡೆಯಲಾದ ಕ್ರೆಡಿಟ್‌ನ ಸಂಪೂರ್ಣ ವಿವರಗಳನ್ನೂ ಆಯೋಗ ರಾಜಕೀಯ ಪಕ್ಷಗಳಿಂದ ಕೇಳಿದೆ. ಈ ಎಲ್ಲಾ ವಿವರಗಳನ್ನು ಎರಡು ಮುಚ್ಚಿದ ಕವರ್‌ಗಳಲ್ಲಿ ಕಳುಹಿಸಿಕೊ ಡಬೇಕು. ಅದನ್ನು ಚುನಾವಣಾ ವೆಚ್ಚ ವಿಭಾಗದ ಕಾರ್ಯದರ್ಶಿಗೆ ಕಳುಹಿಸಿ ಕೊಡ ಬೇಕು. ಮೊಹರು ಮಾಡಲಾದ ಈ ಕವರ್‌ಗಳು ನವಂಬರ್ ೧೫ರ ಸಂಜೆ ಯೊಳಗೆ ತಲುಪಬೇಕೆಂದು ಆಯೋಗ ನೀಡಿರುವ ನಿರ್ದೇಶದಲ್ಲಿ ಸ್ಪಷ್ಟಪಡಿ ಲಾಗಿದೆ. ಈ ಕವರ್‌ಗಳನ್ನು ನವಂಬರ್ ೧೯ರಂದು ಅಥವಾ ಅದರ ಮೊದಲು ಚುನವಣಾ ಆಯೋಗ ಪರಿಶೀಲಿಸ ಲಿದೆ.  ನಂತರ ಆ ಕುರಿತಾದ ಪೂರ್ಣ ಡಾಟಾವನ್ನು  ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್‌ರಿಗೆ   ಕಳುಹಿಸಿಕೊಡಲಿದೆ.

Leave a Reply

Your email address will not be published. Required fields are marked *

You cannot copy content of this page