ವಾಹನಗಳಿಂದ ೩೦ ಕಿಲೋ ಹೊಗೆಸೊಪ್ಪು ಉತ್ಪನ್ನ ವಶ

0
44

ಮಂಜೇಶ್ವರ: ವ್ಯಾಪಕ ರೀತಿಯಲ್ಲಿ ಜಿಲ್ಲೆಗೆ ವಾಹನಗಳ ಮೂಲಕ ತರವಾಗುವ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ಗಳಲ್ಲಿ ವಶಪಡಿಸಲಾಗಿದೆ. ನಿನ್ನೆ ಹಾಗೂ ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ೩೦ ಕಿಲೋ ಹೊಗೆಸೊಪ್ಪು ಉತ್ಪನ್ನಗಳನ್ನು ವಶಪಡಿಸಿ ಒಟ್ಟು ೧೩ ಕೇಸು ದಾಖಲಿ ಸಲಾಗಿದೆ. ಅಲ್ಲದೆ ೨೬೦೦ ರೂ. ದಂಡ ವಸೂಲಿ ಮಾಡಲಾಗಿದೆ. ನಿನ್ನೆ ೮ ಕೇಸು  ದಾಖಲಿಸಿ ೧೦ ಕಿಲೋ ಹಾಗೂ ಮೊನ್ನೆ ೨೦ ಕಿಲೋ ವಶಪಡಿಸಿ ೫ ಕೇಸು  ದಾಖಲಿ ಸಲಾಗಿದೆ. ವಾಹನ ಪರಿಶೋಧನೆಗೆ ಅಬಕಾರಿ ಇನ್‌ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವ ನೀಡಿದರು. ಪ್ರಿವೆಂಟಿವ್ ಆಫೀಸರ್ ಪಿ. ಮೋಹನನ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮನೋಜ್ ಕುಮಾರ್, ಸಿಜು, ಸಿಜಿನ್ ಸಹಕರಿಸಿದರು.

NO COMMENTS

LEAVE A REPLY