ಕುಂಞಾಲಿಕುಟ್ಟಿ ವಿರುದ್ಧ ಕೊನೆಯುಸಿರು ತನಕ ಹೋರಾಟ-ಕೆ.ಟಿ. ಜಲೀಲ್

0
35

ಕಲ್ಲಿಕೋಟೆ: ಮುಸ್ಲಿಂ ಲೀಗ್ ನೇತಾರ ಪಿ.ಕೆ. ಕುಂಞಾಲಿಕುಟ್ಟಿ ಕೋ ಟ್ಯಂತರ ರೂಪಾಯಿಗಳ ಕಾಳಧನವನ್ನು ಲೀಗ್ ನಿಯಂತ್ರಣದಲ್ಲಿರುವ ಮಲ ಪುರಂನ ಎ.ಆರ್. ನಗರ್ ಸಹಕಾರಿ ಬ್ಯಾಂಕ್ ಮೂಲಕ ಬಿಳುಪುಗೊಳಿಸಿದ ರೆಂಬ ಆರೋಪ ಸಿಪಿಎಂ ಹಾಗೂ ಕೇರಳ ರಾಜಕೀಯದಲ್ಲಿ ಭಾರೀ ವಿವಾದಕ್ಕೆಡೆಯಾಗಿದೆ.

ಪಿ.ಕೆ. ಕುಂಞಾಲಿಕುಟ್ಟಿಯವರು ಕಾಳಧನ ಬಿಳುಪುಗೊಳಿಸಿದರೆಂಬ ಬಗ್ಗೆ ಎನ್‌ಫೋರ್ಸ್‌ಮೆಂಟ್  ಡೈರೆಕ್ಟರೇಟ್ ತನಿಖೆ ನಡೆಸಬೇಕೆಂದು ಮಾಜಿ ಸಚಿವರೂ, ಸಿಪಿಎಂ ನೇತಾರರಾದ ಶಾಸಕ ಕೆ.ಟಿ. ಜಲೀಲ್‌ರ ಬೇಡಿಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸುವುದರೊಂದಿಗೆ  ಕುಂಞಾಲಿ ಕುಟ್ಟಿ ವಿರುದ್ಧ ಸವಾಲುಗಳೊಂದಿಗೆ ಜಲೀಲ್ ಮತ್ತೆ ರಂಗಕ್ಕಿಳಿದಿದ್ದಾರೆ.

ಕುಂಞಾಲಿಕುಟ್ಟಿ ವಿರುದ್ಧ ತನ್ನ ಹೋರಾಟ ಕೊನೆಯುಸಿರು ತನಕ ಮುಂದುವರಿಸುವುದಾಗಿ ಜಲೀಲ್ ಇಂದು ಕೂಡಾ ಪುನರಾವರ್ತಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ತನಗೆ ಪಿತೃ ಸಮಾನರೆಂದೂಅವರಿಗೆ ತನ್ನನ್ನು ತಿದ್ದಲು, ಸಲಹೆ ನೀಡಲು ಅಧಿಕಾರವಿಗೆ ಎಂದೂ ಜಲೀಲ್ ತಿಳಿಸಿದ್ದಾರೆ. ಎ.ಆರ್. ನಗರ್ ಸಹಕಾರಿಬ್ಯಾಂಕ್‌ನ ಕಾಳಧನ ವ್ಯವಹಾರದಲ್ಲಿ ಇ.ಡಿ ತನಿಖೆಯ ಅಗತ್ಯವಿಲ್ಲವೆಂದು ಪಿಣರಾಯಿ ವಿಜಯನ್ ತಿಳಿಸಿದ್ದರು.

ಮಾತ್ರವಲ್ಲ ಸಾಧಾರಣ ರೀತಿಯಲ್ಲಿ ಮಂಡಿಸಕೂಡದ ಆರೋಪವನ್ನು ಕೆ.ಟಿ. ಜಲೀಲ್ ಮಂಡಿಸಿದ್ದಾರೆ.  ಅದು ಸರಿಯಲ್ಲ. ಇಂತಹ ಪ್ರಕರಣ ತನಿಖೆ  ನಡೆಸುವ ವ್ಯವಸ್ಥೆ ಕೇರಳದಲ್ಲಿದೆ ಎಂಬುದಾಗಿ ಮುಖ್ಯಮಂತ್ರಿ  ತಿಳಿಸಿದ್ದಾರೆ. ಇದರ ವಿರುದ್ಧ ಕೊನೆಯುಸಿರು ತನಕ ಕುಂಞಾಲಿಕುಟ್ಟಿಯ ವಂಚನೆ ವಿರುದ್ಧ ಹೋರಾಟ ನಡೆಸುವುದಾಗಿ ಜಲೀಲ್ ಇಂದು ತಿಳಿಸಿದ್ದಾರೆ. ಇದೇ ವೇಳೆ ಸಿಪಿಎಂ ಹಾಗೂ ಮುಸ್ಲಿಂ ಲೀಗ್ ಮಧ್ಯೆ ಈ ಹಿಂದಿನಿಂದ ಕಂಡುಬಂದ ಅಪವಿತ್ರ ಮೈತ್ರಿಗೆ ಸ್ಪಷ್ಟ ಪುರಾವೆಯಾಗಿದೆ ಮುಖ್ಯಮಂತ್ರಿಯ ನಿಲುವೆಂದು ಬಿಜೆಪಿ  ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಇದರೊಂದಿಗೆ ಕಾಳಧನ ವಿವಾದ ರಾಜಕೀಯದಲ್ಲಿ ಬಿಸಿಯೇರಿದ ಚರ್ಚಾ ವಿಷಯವಾಗಿ ಬದಲಾಗಿದೆ.

NO COMMENTS

LEAVE A REPLY