ರಾತ್ರಿ ಕರ್ಫ್ಯೂ, ಆದಿತ್ಯವಾರ ಲಾಕ್‌ಡೌನ್ ಹಿಂತೆಗೆತ

0
80

ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಸರಕಾರ ಜ್ಯಾರಿಗೊಳಿಸಿದ ರಾತ್ರಿ ಕರ್ಫ್ಯೂ ಹಾಗೂ ಆದಿತ್ಯವಾರದ ಲಾಕ್‌ಡೌನ್ ಹಿಂತೆಗೆದುಕೊಳ್ಳಲಾಗಿದೆ. ಕರ್ಫ್ಯೂ ಹಿಂತೆಗೆದ ಅದೇ ರೀತಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆಂಶಿಕವಾಗಿ ತೆರೆಯಲು ನಿನ್ನೆ ನಡೆದ ಅವಲೋಕನ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಂತೆ ರಾತ್ರಿ ಕರ್ಫ್ಯೂ ಹಿಂತೆಗೆತ ನಿನ್ನೆ ರಾತ್ರಿ ಯಿಂದಲೇ ಜ್ಯಾರಿಗೆ ಬಂದಿದೆ. ಮೆಡಿ ಕಲ್ ಕಾಲೇಜುಗಳ, ಇಂಜಿನಿಯ ರಿಂಗ್/ ಪಾಲಿಟೆಕ್ನಿಕ್‌ಗಳ ಸಹಿತ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ತರಗತಿಗಳು ಅಕ್ಟೋಬರ್ ೪ರಂದು ಆರಂಭಗೊಳ್ಳಲಿದೆ. ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ಪಡೆದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶವಿರುವುದು. ಇದರಂತೆ ಪದವಿ, ಸ್ನಾತಕೋತ್ತರ ಪದವಿ, ಅಂತಿಮ ವರ್ಷ ವಿದ್ಯಾರ್ಥಿಗಳ, ಅಧ್ಯಾಪಕರು ಹಾಗೂ ನೌಕರರು ಈ ವಾರವೇ ವ್ಯಾಕ್ಸಿನ್ ಪಡೆಯಬೇಕೆಂದು ತಿಳಿಸಲಾಗಿದೆ. ಎರಡು ಡೋಸ್‌ಗೆ ಅರ್ಹತೆಯುಳ್ಳವರು ಕೂಡಾ ಶೀಘ್ರ ಪಡೆಯಬೇಕಾಗಿದೆ.

ಎಸ್‌ಎಸ್‌ಎಲ್‌ಸಿ, ಪ್ಲಸ್‌ಟು ತರಗತಿಗಳ ಶಿಕ್ಷಣ ಕೂಡಾ ಪ್ರಧಾನ ವಾದುದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದ್ದರಿಂದ ಶಾಲೆ ಅಧ್ಯಾಪಕರು ಕೂಡಾ ಈ ವಾರವೇ ವ್ಯಾಕ್ಸಿನೇಶನ್ ಪೂರ್ತಿಗೊಳಿಸಬೇಕು. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆಗಳು ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.

೧೮ ವರ್ಷಕ್ಕಿಂತ ಮೇಲಿನವರಿಗೆ ತರಬೇತಿ ನೀಡುವ ರೆಸಿಡೆನ್ಶಿಯಲ್ ಸಂಸ್ಥೆಗಳನ್ನು ತೆರೆಯಬಹುದೆಂದು ತಿಳಿಸಲಾಗಿದೆ. ಈ ಸಂಸ್ಥೆಗಳು ಬಾಹ್ಯ ಸಂಪರ್ಕ ಹೊರತುಪಡಿಸುವ ರೀತಿಯಲ್ಲಿ ‘ಬಯೋ ಸೆಕ್ಯೂರ್ ಬಬ್‌ಲ್’ ಮಾದರಿಯಲ್ಲಿ ಕಾರ್ಯಾ ಚರಿಸಬಹುದಾಗಿದೆಯೆಂದೂ ನಿನ್ನೆಯ ಅವಲೋಕನ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೇ ವೇಳೆ ನಿನ್ನೆ ಕೋವಿಡ್ ರೋಗಿಗಳ ಪ್ರತಿದಿನ ಸಂಖ್ಯೆ (ಟಿಪಿಆರ್)ಯಲ್ಲಿ ಕಡಿತವುಂಟಾಗಿರು ವುದು ಅಲ್ಪ ನೆಮ್ಮದಿ ಮೂಡಿಸಿದೆ.

ನಿನ್ನೆ ೨೫,೭೭೨ ಮಂದಿಗೆ ಕೋವಿಡ್ ದೃಢೀಕರಿಸಲಾಗಿದೆ. ಟಿಪಿಆರ್ ೧೫.೮೭ ಶೇ. ಆಗಿತ್ತು. ಇದೇ ವೇಳೆ ಇತ್ತೀಚೆಗಿನಿಂದ ಮೃತಪಟ್ಟವರ ಪೈಕಿ ೧೮೯ ಮಂದಿಗೆ ಕೋವಿಡ್ ಬಾಧಿಸಿತ್ತೆಂದು ತಿಳಿದು ಬಂದಿದೆ. ಇದರಿಂದ ರಾಜ್ಯ ಕೋವಿಡ್ ನಿಂದಾಗಿ ಸಾವಿಗೀಡಾದವ ಸಂಖ್ಯೆ ೨೧,೮೨೦ಕ್ಕೇರಿದೆ.

NO COMMENTS

LEAVE A REPLY