ಬದಿಯಡ್ಕ ಇನ್‌ಸ್ಪೆಕ್ಟರ್ ಸಹಿತ ಹಲವು ಅಧಿಕಾರಿಗಳಿಗೆ ವರ್ಗಾವಣೆ

0
139

ಕಾಸರಗೋಡು: ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ನೀಡಲಾಗಿದೆ. ಇದರಂತೆ ಬದಿಯಡ್ಕ ಇನ್‌ಸ್ಪೆಕ್ಟರ್ ಸಲೀಂ ಅವರನ್ನು ಕಾಸರಗೋಡು ಕ್ರೈಂಬ್ರಾಂಚ್‌ಗೆ ವರ್ಗಾಯಿಸಲಾಗಿದೆ. ಬದಿಯಡ್ಕ ಪೊಲೀಸ್ ಠಾಣೆಗೆ ಕೊಲ್ಲಂ ನಿವಾಸಿ ಅಶ್ವಿತ್ ಕಾರಾನ್ಮಯಿಲ್ ಅವರನ್ನು ನೇಮಿಸಲಾಗಿದೆ.

ಕಾಸರಗೋಡು ಕ್ರೈಂಬ್ರಾಂಚ್ ಇನ್ ಸ್ಪೆಕ್ಟರ್ ಎ.ಕೆ. ಶೆರಿ ಅವರನ್ನು ಕೊಲ್ಲಂಗೆ ವರ್ಗಾಯಿಸಲಾಗಿದೆ. ಚಿತ್ತಾರಿಕಲ್ ಇನ್‌ಸ್ಪೆಕ್ಟರ್ ಕೆ. ಪ್ರೇಮ್ ಸದನ್ ಅವರನ್ನು ವಡಗರ ಕಂಟ್ರೋಲ್ ರೂಂಗೆ ವರ್ಗಾಯಿಸಲಾಗಿದೆ. ಸ್ಟೇಟ್ ಸ್ಪೆಷಲ್ ಬ್ರಾಂಚ್ ಕಾಸರಗೋಡು ಕಚೇರಿಯ ಸಜಿತ್ ಅವರನ್ನು ಕರಿವೆಳ್ಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತಳಂಗರೆ ಕರಾವಳಿ ಪೊಲೀಸ್ ಠಾಣೆಯ ರಾಜೇಶ್ ಅವರನ್ನು ಸ್ಟೇಟ್ ಸ್ಪೆಷಲ್ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ.

ಬದಿಯಡ್ಕ ಇನ್‌ಸ್ಪೆಕ್ಟರ್ ಆಗಿದ್ದ ಸಲೀಂ ಅವರು ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದರು ಎಂದು ಈ ಹಿಂದೆಯೇ ವರದಿಯಾಗಿತ್ತು. ಇದರ ವಿರುದ್ಧ ವ್ಯಾಪಕ ದೂರು ಉಂಟಾದ ಹಿನ್ನೆಲೆಯಲ್ಲಿ ಸ್ಪೆಷಲ್ ಬ್ರಾಂಚ್ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಮರಳು ಸಾಗಾಟ ಸಹಿತ ವಿವಿಧ ಮಾಫಿಯಾಗಳಿಗೆ ಸಲೀಂ ಅವರು ಒತ್ತಾಸೆ ನೀಡುತ್ತಾರೆ ಎಂಬ ಬಗ್ಗೆ ವರದಿ ಉಂಟಾಗಿತ್ತು.

NO COMMENTS

LEAVE A REPLY