ವ್ಯಕ್ತಿ ಆತ್ಮಹತ್ಯೆ

0
40

ಹೊಸದುರ್ಗ: ಇಲ್ಲಿನ ಸ್ನೇಹಾಲಯಕ್ಕೆ ಬಂದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಚಿತ್ತಾರಿಕಲ್ ನಿವಾಸಿ ಜಾನ್‌ಸನ್ (೩೩) ಆತ್ಮಹತ್ಯೆಗೈದ ವ್ಯಕ್ತಿ. ಇವರು ಕಳೆದ ಎಂಟು ತಿಂಗಳಿಂದ ಸ್ನೇಹಾಲಯದಲ್ಲಿ ವಾಸಿಸುತ್ತಿದ್ದರು. ಒಂದು ತಿಂಗಳ ಹಿಂದೆ ಅವರು ಊರಿಗೆ ಹೋದವರು ಮನೆಗೆ  ತಲುಪಿರಲಿಲ್ಲ. ಅನಂತರ ಇವರನ್ನು ಪೊಲೀಸರು ಮರಳಿ ಸ್ನೇಹಾಲಯಕ್ಕೆ ತಲುಪಿಸಿದ್ದರು. ನಿನ್ನೆ ಇವರ ಮೃತದೇಹ ಸ್ನೇಹಾಲಯದಲ್ಲಿ ಕಂಡುಬಂದಿದೆ. ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY