ಸಾರ್ವಜನಿಕ ಸಂಸ್ಥೆಗಳನ್ನು ಲಾಭದಾಯಕವಾಗಿಸುವುದು ಸರಕಾರದ ಗುರಿ-ಸಚಿವ ಪಿ. ರಾಜೀವ್

0
19

ಕಾಸರಗೋಡು: ಸಾರ್ವಜನಿಕ ಸಂಸ್ಥೆಗಳನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಲಾಭದಾಯಕವಾಗಿಸು ವುದು ರಾಜ್ಯ ಸರಕಾರದ ಗುರಿ ಎಂದು ಉದ್ದಿಮೆ ಸಚಿವ ಪಿ. ರಾಜೀವ್ ತಿಳಿಸಿದರು.

ಕಾಞಂಗಾಡಿನ ಪುದುಕೈಯಲ್ಲಿ ರಾಜ್ಯ ಸರಕಾರದ ೧೦೦ ದಿನ ಕ್ರಿಯಾ ಯೋಜನೆಯಂತೆ ನಿರ್ಮಿಸಲಾದ ಹೈಟೆಕ್ ತೆಂಗಿನನಾರು ಡಿಫೈಬರಿಂಗ್ ಯೂನಿಟ್ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಧಾರಾಳ ತೆಂಗಿನ ನಾರು ಲಭ್ಯವಿದ್ದರೂ ಕೇವಲ ಶೇ. ೧೮ ಮಾತ್ರ ಉದ್ದಿಮೆಗಾಗಿ ಬಳಕೆಯಾಗುತ್ತಿದೆ. ಇವುಗಳಲ್ಲಿ ಶೇ. ೩೫ ಮಾತ್ರ ಮೌಲ್ಯಾ ದರಿತ ಉತ್ಪನ್ನಗಳಾಗಿ ಮಾರ್ಪಾಡುತ್ತಿವೆ. ಇದನ್ನು ಶೇ. ೪೫ ಆಗಿ ಹೆಚ್ಚಳಗೊಳಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕ ಎನ್.ಎ. ನೆಲ್ಲಿಕುನ್ನು, ಉದ್ದಿಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎ.ಪಿ.ಎಂ. ಮುಹಮ್ಮದ್ ಹನೀಷ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣ, ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ ಉಪಸ್ಥಿತರಿದ್ದರು.

NO COMMENTS

LEAVE A REPLY