ಪೆರ್ಲ-ಕುಮಳಿ ಬಸ್ ಪ್ರಯಾಣಿಕರಿಗೆ ಬಹುಮಾನ ಯೋಜನೆ

0
31

ಹೊಸದುರ್ಗ: ಪೆರ್ಲ-ಕುಮಳಿ ಸೂಪರ್ ಫಾಸ್ಟ್ ಬಸ್‌ನ ಆನ್ ಲೈನ್ ದೀರ್ಘ ದೂರ ಪ್ರಯಾಣಿಕರನ್ನು ಮಲೆನಾಡು ವಲಯ ಪ್ಯಾಸೆಂಜರ್ಸ್ ಅಸೋಸಿಯೇಶನ್ ಸಿದ್ಧಪಡಿಸಿದ ಬಹುಮಾನಗಳು ಕಾಯುತ್ತಿದೆ. ಜೊತೆಗೆ ಅತ್ಯಧಿಕ ಸಂಗ್ರಹ ಗಳಿಸಿಕೊಡುವ ಇಬ್ಬರು ಬಸ್ ನೌಕರರಿಗೆ ಬಹುಮಾನ ಲಭಿಸಲಿದೆ.

ಬಸ್‌ಗೆ ಪ್ರಯಾಣಿಕರನ್ನು ಆಕರ್ಷಿಸಲು, ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಹೆಚ್ಚಿಸಲು ಈ ಬಹುಮಾನ ಯೋಜನೆ ಹಮ್ಮಿಕೊಳ್ಳಲಾಗಿ ದೆಯೆಂದು ಅಸೋಸಿಯೇಶನ್  ಪದಾಧಿಕಾರಿಗಳು ತಿಳಿಸಿದ್ದಾರೆ.

ಬದಿಯಡ್ಕ, ಮುಳ್ಳೇರಿಯ, ಒಡೆಯಂಚಾಲ್, ಪರಪ್ಪ, ವೆಳ್ಳರಿಕುಂಡ್, ಚಿತ್ತಾರಿಕಲ್, ಆಲಿಕ್ಕೋಡ್, ಕರುವಂಜಾಲ್, ಒಡುವಳ್ಳಿ, ಇಡುಕ್ಕಿ  ಜಿಲ್ಲೆಯ ಕುಮಳಿ, ಕಟ್ಟಪ್ಪನ, ಇಡುಕ್ಕಿ, ಚಿರುತೋನಿ, ಚೇಲಚ್ಚುವಡ್ ಎಂಬೆಡೆಗಳಿಂದ ೩೫೦ ರೂ.ಗಿಂತ ಹೆಚ್ಚಿನ ಮೌಲ್ಯದ ಟಿಕೆಟ್ ಆನ್‌ಲೈನ್ ಮೂಲಕ ಮುಂಗಡ ಕಾಯ್ದಿರಿಸುವ ಪ್ರಯಾಣಿಕರ ಮೊಬೈಲ್ ನಂಬ್ರಗಳನ್ನು ಡ್ರಾ ಮಾಡಿ ೫ ಮಂದಿಗೆ ಬಹುಮಾನ ನೀಡಲಾಗುವುದು. ಈ ಯೋಜನೆ ನಾಳೆ ಆರಂಭಗೊಂಡು ಒಂದು ತಿಂಗಳು ಮುಂದುವರಿಯಲಿದೆ.

NO COMMENTS

LEAVE A REPLY