ಕೋವಿಡ್ ನಿಯಂತ್ರಣ ಇನ್ನಷ್ಟು ಸಡಿಲು ಸಾಧ್ಯತೆ ಇಂದು ನಿರ್ಧಾರ

0
31

ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ  ಇನ್ನಷ್ಟು ಸಡಿಲಿಕೆ ನೀಡಲು ಸರಕಾರ ಚಿಂತನೆ  ನಡೆಸಿದೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವ ವಾರದ ಅವಲೋಕನಾ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಉಂಟಾಗಲಿದೆ.

ರಾಜ್ಯದಲ್ಲಿ ಕೋವಿಡ್ ರೋಗಿ ಗಳ ಸಂಖ್ಯೆಯಲ್ಲಿ ಇಳಿಮುಖ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಕುಳಿತು ತಿನ್ನುವ ಹಾಗೂ ಬಾರ್‌ಗಳನ್ನು ತೆರೆಯುವ ಬಗ್ಗೆ ಇಂದು ನಿರ್ಧರಿಸಲಾಗುವುದು. ಹೋಟೆಲ್‌ಗಳಲ್ಲಿ ಮೇಜುಗಳನ್ನು ನಿಶ್ಚಿತ ದೂರದಲ್ಲಿರಿಸಿ ಊಟ ಬಡಿಸಬಹುದು ಎಂಬ ಆರೋಗ್ಯ ಅಧಿಕಾರಿಗಳ ಸಲಹೆಯನ್ನು ಇಂದು ಪರಿಗಣಿಸಲಾಗುವುದು. ಬಾರ್‌ಗಳನ್ನು ತೆರೆಯುವ ಬಗ್ಗೆಯೂ ಇಂದು ನಿರ್ಧಾರ ಕೈಗೊಳ್ಳಲಾಗುವುದು.

ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಯಲ್ಲಿ ಗಣನೀಯ ಇಳಿಕೆಯುಂ ಟಾಗಿದೆ. ಮುಂದಿನ ದಿನಗಳಲ್ಲಿ  ಇಳಿಕೆಯ ಸಾಧ್ಯತೆಯಿದೆ. ಅಲ್ಲದೆ ರಾಜ್ಯದಲ್ಲಿ ವ್ಯಾಕ್ಸಿನೇಶನ್ ಅತೀ ವೇಗದಲ್ಲಿ ಸಾಗುತ್ತಿದೆ.

ತಿರುವನಂತಪುರ, ತೃಶೂರು, ಕಲ್ಲಿಕೋಟೆ ಎಂಬೆಡೆಗಳಲ್ಲಿ ಮ್ಯೂಸಿ ಯಂಗಳನ್ನು ಬೆಳಿಗ್ಗೆ ತೆರೆಯುವ ಬಗ್ಗೆಯೂ ನಿರ್ಧರಿಸಲಾಗುವುದು. ತಿರುವನಂತಪುರದಲ್ಲಿ ಬೆಳಗ್ಗಿನ ಸವಾರಿ, ಸಂಜೆ ಸವಾರಿಗಳಿಗೆ ಅನುಮತಿ ನೀಡಲಾಗುವುದು. ಇನ್ನು ಮುಂದೆ ಶನಿವಾರಗಳಂದು ಸರಕಾರಿ ಕಚೇರಿಗಳನ್ನು ತೆರೆಯ ಲಾಗುವುದು. ಶಾಲೆ ತೆರೆಯುವ  ಬಗ್ಗೆ ಬುಧವಾರದ ನ್ಯಾಯಾಲಯದ ಆದೇಶದ ನಂತರ ನಿರ್ಧಾರ ಕೈಗೊಳ್ಳಲಾಗುವುದು.

ರಾಜ್ಯದಲ್ಲಿ ನಿನ್ನೆ ೧೫೦೫೮ ಮಂದಿಗೆ ಕೊರೊನಾ ದೃಢೀಕರಿಸಲಾ ಗಿದೆ. ರಾಜ್ಯದ ನಿನ್ನೆಯ ಟಿಪಿಆರ್ ೧೬.೩೯ ಶೇಕಡಾ ಆಗಿದೆ. ನಿನ್ನೆ  ಕೋವಿ ಡ್‌ನಿಂದಾಗಿ ೯೯ ಮಂದಿ ಮೃತಪಟ್ಟಿದ್ದಾರೆ.

NO COMMENTS

LEAVE A REPLY