೮ನೇ ತರಗತಿ ವಿದ್ಯಾರ್ಥಿನಿಯ ಆತ್ಮಹತ್ಯೆ: ಮಕ್ಕಳ ಹಕ್ಕು ಆಯೋಗದಿಂದ ಕೇಸು ದಾಖಲು

0
27

ಕಾಸರಗೋಡು: ದೇಳಿಯ ಖಾಸಗಿ ಶಿಕ್ಷಣಾಲಯವೊಂದರ ೮ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕು ಆಯೋಗ ಕೇಸು ದಾಖಲಿಸಿದೆ.

ಮಾಧ್ಯಮಗಳು ಪ್ರಕಟಿಸಿರುವ ವರದಿಗಳ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಸ್ವ-ಪ್ರೇರಣೆಯಿಂದ ಕೇಸು ದಾಖಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೇಕಲ ಡಿವೈಎಸ್‌ಪಿ, ಮೇಲ್ಪರಂಬ ಪೊಲೀಸ್ ಠಾಣೆ ಹೌಸ್ ಅಧಿಕಾರಿ, ಜಿಲ್ಲಾ ಮಕ್ಕಳ ಸಂರಕ್ಷಣೆ ಅಧಿಕಾರಿ ಅವರು ಅ. ೪ರ ಮುಂಚಿv ವಾಗಿ ಈ ಸಂಬಂಧ ವರದಿ ಸಲ್ಲಿಸುವಂತೆ ಆಯೋಗ ಆದೇಶ ನೀಡಿದೆ.

NO COMMENTS

LEAVE A REPLY