ಕಾರಿನಲ್ಲಿ ತಲುಪಿದ ತಂಡದಿಂದ ಯುವಕನಿಗೆ ಇರಿತ: ೪ ಮಂದಿ ವಿರುದ್ಧ ಹತ್ಯೆಯತ್ನ ಕೇಸು

0
55

ಕುಂಬಳೆ: ಕಾರಿನಲ್ಲಿ ತಲುಪಿದ ತಂಡವೊಂದು ಯುವಕನಿಗೆ ಇರಿದು ಗಂಭೀರ ಗಾಯಗೊಳಿಸಿದ  ಘಟನೆ ನಡೆದಿದೆ. ಇರಿತದಿಂದ ಗಂಭೀರಗಾಯ ಗೊಂಡ ಯುವಕನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಸಂಬಂಧ ನಾಲ್ಕು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವು ದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ.

ಆರಿಕ್ಕಾಡಿ ಕಡವತ್‌ನ ಇಬ್ರಾಹಿಂರ ಪುತ್ರ ಸೈನುದ್ದೀನ್ (೩೧) ಎಂಬವರಿಗೆ ಇರಿದು ಗಾಯಗೊಳಿಸಲಾಗಿದೆ. ಸೈನುದ್ದೀನ್ ಹಾಗೂ ಸ್ನೇಹಿತ ಆರಿಕ್ಕಾಡಿ ಕಡವತ್‌ನ ಇಬ್ರಾಹಿಂ (೨೯) ನಿನ್ನೆ ಸಂಜೆ ೬.೧೫ರ ವೇಳೆ ಚೂರಿತ್ತಡ್ಕದಲ್ಲಿ ರುವ ಮೊಬೈಲ್ ಅಂಗಡಿ ಮುಂದೆ ನಿಂತಿದ್ದಾಗ ಈ ಘಟನೆ ನಡೆದಿದೆ. ಕಾರಿನಲ್ಲಿ ತಲುಪಿದ ನಾಲ್ಕು ಮಂದಿ ಪೈಕಿ ಇಬ್ಬರು ಸೈನುದ್ದೀನ್‌ಗೆ  ಸಮೀಪಕ್ಕೆ ಬಂದು ವಾಗ್ವಾದ ನಡೆಸಿದ್ದು,  ಬಳಿಕ ಸೈನುದ್ದೀನ್ ಇರಿದನೆನ್ನಲಾಗಿದೆ. ತಕ್ಷಣ ವೇ ಅಕ್ರಮಿಗಳು ಕಾರಿನಲ್ಲಿ ಪರಾರಿಯಾ ಗಿದ್ದಾರೆ. ಇರಿತದಿಂದ ಗಾಯಗೊಂಡ ಸೈನುದ್ದೀನ್‌ರನ್ನು ಸ್ಥಳೀಯರು ಕೂಡಲೇ ಕುಂಬಳೆ ಆಸ್ಪತ್ರೆಗೂ, ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.

ಈ ಘಟನೆ  ಸಂಬಂಧ ಇಬ್ರಾಹಿಂ ನೀಡಿದ ದೂರಿನಂತೆ ಕೊಯಿಪ್ಪಾಡಿ ನಿವಾಸಿಯೂ ಇದೀಗ ಬಂಬ್ರಾಣದಲ್ಲಿ ವಾಸಿಸುತ್ತಿರುವ ಅಬ್ದುಲ್ ಬಾಸಿತ್ (೩೦), ಕೊಯಿಪ್ಪಾಡಿ ನಿವಾಸಿ ಅನಿಲ್ (೩೦) ಎಂಬವರ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಲಾಗಿದೆ. ಅವರ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ  ಪೊಲೀಸರು ತಿಳಿಸಿದ್ದಾರೆ.

ಸೈನುದ್ದೀನ್ ಹಾಗೂ ಆರೋಪಿ ಬಾಸಿತ್ ಮಧ್ಯೆ ವೈಯಕ್ತಿಕ ದ್ವೇಷವಿತ್ತೆಂದೂ ಇದೇ ಕಾರಣದಿಂದ ಈ ಆಕ್ರಮಣ ನಡೆದಿ ದೆಯೆನ್ನಲಾಗುತ್ತಿದೆ. ಗಾಯಗೊಂಡು ಆಸ್ಪತ್ರೆ ಯಲ್ಲಿ ದಾಖಲಾಗಿರುವ ಸೈನುದ್ದೀನ್‌ರ ಹೇಳಿಕೆ ದಾಖಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಇದೀಗಿನ  ಪ್ರಕರಣದಲ್ಲಿ  ಆರೋಪಿಯಾಗಿರುವ ಅಬ್ದುಲ್ ಬಾಸಿತ್ ೨೦೧೫ರಲ್ಲಿ ಆರಿಕ್ಕಾ ಡಿಯ ಸಾಕಿರ ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲೂ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY