ತರಗತಿ  ವಿವಿಧ ಹಂತಗಳಲ್ಲಿ: ರಾಜ್ಯದಲ್ಲಿ ಶಾಲೆ ತೆರೆಯುವ ಸಿದ್ಧತೆ ಆರಂಭ

0
33

ತಿರುವನಂತಪುರ: ನವಂಬರ್ ೧ರಿಂದ ರಾಜ್ಯದಲ್ಲಿ  ಶಾಲೆಗಳು ತೆರೆಯುವ ಹಿನ್ನೆಲೆಯಲ್ಲಿ  ವ್ಯಾಪಕ ಸಿದ್ಧತೆ ಆರಂಭಗೊಂಡಿದೆ. ಇದಕ್ಕೆಸಂಬಂಧಪಟ್ಟಂತೆ ಶಿಕ್ಷಣ ಸಚಿವ ಎ. ಶಿವನ್ ಕುಟ್ಟಿ ಹಾಗೂ ಆರೋಗ್ಯ ಸಚಿವೆ ವೀಣಾ ಜೋರ್ಜ್ ಪರಸ್ಪರ ಮಾತುಕತೆ ನಡೆಸಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖಾ ಪ್ರಮುಖರಜತೆ ಮಾತುಕತೆ ನಡೆಸಿದ ನಂತರ ವರದಿಯನ್ನು ಸಿದ್ದಪಡಿಸಿ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು. ನವಂಬರ್ ೧ರಿಂದ ೧-೭ ತರಗತಿಗಳು, ೧೦,೧೨ ತರಗತಿಗಳು ಆರಂಭಗೊಳ್ಳಲಿದೆ. ಇತರ ತರಗತಿಗಳು ನವಂಬರ್ ೧೫ರಿಂದ ಆರಂಭಗೊಳ್ಳಲಿದೆ.

ವಿವಿಧ ಹಂತಗಳಲ್ಲಿ ತರಗತಿಗಳು ನಡೆಯಲಿದೆ. ೭ ಸಾವಿರಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳು ರಾಜ್ಯದಲ್ಲಿವೆ. ಇಷ್ಟು ಮಕ್ಕಳನ್ನು  ಒಮ್ಮೆಲೇ ಶಾಲೆಗೆ ಬರಮಾಡುವ ಬದಲು  ಹಂತಹಂತವಾಗಿ ತರಗತಿ ನಡೆಸಲಾಗುವುದು. ಆನ್‌ಲೈನ್, ಆಫ್‌ಲೈನ್ ತರಗತಿಗಳನ್ನು ಸಂಯೋಜಿಸಲು ಸಹ ಯೋಚಿಸಲಾಗುವುದು. ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷತೆ ಖಾತರಿಗೊಳಿಸಿ ತರಗತಿ ನಡೆಯಲಿದೆ. ಸಾರ್ವಜನಿಕರ ಸಹಾಯದೊಂದಿಗೆ ತರಗತಿ ಕೋಣೆಗಳನ್ನು ಶುಚಿಗೊಳಿಸಲು ಸಹಾ ಯೋಜನೆ ಇರಿಸಲಾಗಿದೆ.  ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ವಿದ್ಯಾರ್ಥಿಗಳು ಪ್ರಯಾಣಿಸುವ ಬಸ್ ಸಹಿತ ವಾಹನಗಳನ್ನು ಅಣುನಾಶಗೈಯ್ಯಲಾಗುವುದು. ಶಾಲೆಗಳನ್ನು ತೆರೆಯುವ ಸಿದ್ಧತೆ ಅಕ್ಟೋಬರ್ ೧೫ರ ಮೊದಲು ಪೂರ್ತಿಗೊಳಿಸಲು ಸಹ ಆದೇಶಿಸ ಲಾಗಿದೆ. ಶಾಲೆಗಳು ತೆರೆಯುವ ಬಗ್ಗೆ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ.

NO COMMENTS

LEAVE A REPLY