ಮದ್ಯ, ಬಿಯರ್ ಸಂಗ್ರಹ ಓರ್ವನ ವಿರುದ್ಧ ಕೇಸು

0
28

ಕುಂಬಳೆ: ಮದ್ಯ ಹಾಗೂ ಬಿಯರ್ ಅನಧಿಕೃತವಾಗಿ ಸಂಗ್ರ ಹಿಸಿಟ್ಟಿದ್ದ ಆರೋ ಪದಲ್ಲಿ ಓರ್ವನ ವಿರುದ್ಧ ಕೇಸು ದಾಖಲಿ ಸಲಾಗಿದೆ. ಮಂಜೇಶ್ವರ ಕೊಡ್ಲಮೊಗರು ತಾಮರ್ ನಿವಾಸಿ ಭರತ್‌ರಾಜ್ (೩೨)ನ ವಿರುದ್ಧ ೧೮೦ ಎಂ.ಎಲ್.ನ ೧೯ ಬಾಟ್ಲಿ, ೯೦ ಎಂ.ಎಲ್.ನ ೧೪೪ ಬಾಟ್ಲಿ ಸೇರಿ ಒಟ್ಟು ೧೬.೩೮ ಲೀಟರ್ ಕರ್ನಾಟಕ ಮದ್ಯ ಹಾಗೂ ೫.೮೫ ಲೀ. ಬಿಯರ್ ಸಂಗ್ರಹಿಸಿಟ್ಟ ಆರೋಪದಂತೆ ಕೇಸು ದಾಖಲಿಸಲಾಗಿದೆ. ಆರೋಪಿ ಪರಾರಿ ಯಾಗಿದ್ದಾನೆ. ಈ ಬಗ್ಗೆ ಕುಂಬಳೆ ಅಬಕಾರಿ ರೇಂಜ್‌ನ ಪಿ.ಒ. ಶೇಖ್ ಅಬ್ದುಲ್ ಬಶೀರ್, ಸಿಇಒಗಳಾದ ಸುಧೀಶ್ ಎ, ಅಖಿಲೇಶ್, ಸಬಿತ್‌ಲಾಲ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.

NO COMMENTS

LEAVE A REPLY