ಕೇರಳದಲ್ಲಿ ಡೆಂಗ್ಯೂ ಡೆನ್ವ್ ೨ ವೈರಸ್ ಪತ್ತೆ ಜಾಗ್ರತೆ ಪಾಲಿಸುವಂತೆ ಕೇಂದ್ರ ಆದೇಶ

0
23

ಕಾಸರಗೋಡು: ಡೆಂಗ್ಯೂ ಜ್ವರದ ಅತೀ ಅಪಾಯಕಾರಿ ರೂಪವಾದ ಡೆನ್ವ್ ೨ ಎಂಬ ವೈರಸ್ ಕೇರಳ ಸಹಿತ ಹನ್ನೊಂದು ರಾಜ್ಯಗಳಲ್ಲಿ ಪತ್ತೆಹಚ್ಚಲಾಗಿದೆ.  ಈ ಹಿನ್ನೆಲೆಯಲ್ಲಿ ಈ ರಾಜ್ಯಗಳು ಭಾರೀ ಜಾಗ್ರತೆ ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಕರೆನೀಡಿದೆ. ಕೋವಿಡ್ ಹರಡುವಿಕೆ ಬಗ್ಗೆ ಅವಲೋಕನ ನಡೆಸಲು ಸೇರಿದ ಸಚಿವಾಲಯದ ಉನ್ನ ತಾಧಿಕಾರಿಗಳ ಸಮಿತಿ ಸಭೆಯಲ್ಲಿ ಡೆಂಗ್ಯೂ  ಹುಟ್ಟಿಸುವ ಆತಂಕದ ಬಗ್ಗೆ ಚರ್ಚೆ ನಡೆಸಲಾಯಿತು.  ರೋಗ ಬಾಧಿತರನ್ನು ಪತ್ತೆಹಚ್ಚಲು ಹಾಗೂ ಚಿಕಿತ್ಸೆ ನೀಡಲಿರುವ ಕ್ರಮಗಳನ್ನು ತ್ವರಿತಗೊಳಿಸುವಂತೆಯೂ, ಅಗತ್ಯದ ತಪಾಸಣೆ ಸಾಮಗ್ರಿ ಹಾಗೂ ಔಷಧ ದಾಸ್ತಾನಿ ರಿಸುವಂತೆಯೂ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

NO COMMENTS

LEAVE A REPLY