ಪೊಲೀಸ್ ಅಧಿಕಾರಿಯ ಪುತ್ರಿಗೆ ಕಾರಿನಲ್ಲಿ ಕಿರುಕುಳ: ಆರು ಮಂದಿ ವಿರುದ್ದ ಪೋಕ್ಸೋ ಕೇಸು

0
35

ಹೊಸದುರ್ಗ: ಪೊಲೀಸ್ ಅಧಿಕಾರಿಯ ಅಪ್ರಾಪ್ತೆ ಪುತ್ರಿಗೆ ೬ ಮಂದಿಯ ತಂಡ ಕಾರಿನಲ್ಲಿ ಕಿರುಕುಳ  ನೀಡಲಾಗಿದೆಯೆಂದು ದೂರಲಾಗಿದೆ. ಇದಕ್ಕೆ ಸಂಬಂಧಪಟ್ಟು ಬಾಲಕಿಯ  ದೂರಿನಂತೆ ಓರ್ವ ವ್ಯಾಪಾರಿ ಸಹಿತ ಆರು ಮಂದಿಯ ವಿರುದ್ಧ ಫೋಕ್ಸೋ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ. ಪಯ್ಯನ್ನೂರು ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳ ೧೯ರಂದು ಘಟನೆ ನಡೆದಿದೆ.  ಪೊಲೀಸ್ ಅಧಿಕಾರಿ ಹಾಗೂ ಪುತ್ರಿ ಕಾರಿನಲ್ಲಿ ಸಾಗುತ್ತಿದ್ದ ಮಧ್ಯೆ ಪೆರುಂಬ ಎಂಬಲ್ಲಿಗೆ ತಲುಪಿದಾಗ ಕಾರು ನಿಲ್ಲಿಸಲಾಯಿತು. ಪೊಲೀಸ್ ಅಧಿಕಾರಿ ಸಮೀಪದ ಬೇಕರಿಗೆ ಹೋದಾಗ ವ್ಯಾಪಾರಿಯ ನೇತೃತ್ವದಲ್ಲಿ ೬ ಮಂದಿ ಬಾಲಕಿಗೆ  ಕಿರುಕುಳ ನೀಡಿದರೆಂದು ದೂರಲಾಗಿದೆ. ಅನಂತರ ಮನೆಗೆ ಬಂದ ಬಾಲಕಿ ಅಸ್ವಸ್ತಳಾಗಿದ್ದು ಮರುದಿನ ಆಕೆಗೆ ಜ್ವರ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ವೈದ್ಯರಲ್ಲಿ ತಪಾಸಣೆಗೆ ಹೋದಾಗ ಬಾಲಕಿ ಕಿರುಕುಳ ವಿಷಯ ಹೇಳಿದ್ದಳೆನ್ನಲಾಗಿದೆ. ಅದರಂತೆ ವೈದ್ಯರು ನೀಡಿದ ಮಾಹಿತಿಯಂತೆ ಚೈಲ್ಡ್ ಲೈನ್ ಅಧಿಕಾರಿ ಆಗಮಿಸಿ ಬಾಲಕಿಯ ಹೇಳಿಕೆ ದಾಖಲಿಸಿದರು. ಬಾಲಕಿ  ನ್ಯಾಯಾಧೀಶರ ಮುಂದೆಯೂ ಇದೇ ಹೇಳಿಕೆ ನೀಡಿದ್ದಾಳೆ. ಆದರೆ  ಪೊಲೀಸ್ ಅಧಿಕಾರಿ ಹಾಗೂ ವ್ಯಾಪಾರಿಯ ಮಧ್ಯೆ ಪೂರ್ವದ್ವೇಷವಿತ್ತೆಂದು ತಿಳಿದುಬಂದಿದೆ. ವ್ಯಾಪಾರಿಯ ಅಂಗಡಿಯ ಮುಂದೆ ಈ ಹಿಂದೆ ಪೊಲೀಸ್ ಅಧಿಕಾರಿ ಕಾರು ನಿಲ್ಲಿಸಿದ್ದು ಈ ವೇಳೆ ಪ್ರಕರಣದಲ್ಲಿ  ಉಂಟಾಗಿತ್ತು.  ಈ ಬಗ್ಗೆ ವ್ಯಾಪಾರಿ ಡಿಜಿಪಿಗೆ  ದೂರು ನೀಡಿದ್ದು, ಡಿಜಿಪಿ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದರು.

NO COMMENTS

LEAVE A REPLY