ನಾರ್ಕೋಟಿಕ್ ಜಿಹಾದ್: ಇಂದು ಧಾರ್ಮಿಕ ಮುಖಂಡರ ಸಭೆ

0
29

ತಿರುವನಂತಪುರ: ರಾಜ್ಯದಲ್ಲಿ ನಾರ್ಕೋಟಿಕ್ ಜಿಹಾದ್ ಕಾರ್ಯಾ ಚರಿಸುತ್ತಿದೆಯೆಂಬ  ಪಾಲಾ ಬಿಷಪ್‌ರ ಹೇಳಿಕೆಯ ಬಗ್ಗೆ ಚರ್ಚಿಸಲು ವಿವಿಧ ಮತ ನೇತಾರರ ಸಭೆ ಇಂದು ತಿರುವ ನಂತಪುರದಲ್ಲಿ ನಡೆಯಲಿದೆ. ಮುಸ್ಲಿಂ, ಕ್ರೈಸ್ತ, ಹಿಂದೂ ಧಾರ್ಮಿಕ ಮುಖಂಡರು ಇಂದು ಸಂಜೆ ರಾಜಧಾನಿಯಲ್ಲಿ ಸಭೆ ಸೇರಿ ಮಾತುಕತೆ ನಡೆಸುವರು. ಸರಕಾರ ಈ  ವಿವಾದದ ಬಗ್ಗೆ ಮಧ್ಯಪ್ರವೇಶಿಸ ಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾ ಯಿಸಿತು. ಈ ಹಿನ್ನೆಲೆಯಲ್ಲಿ  ಧಾರ್ಮಿಕ ಮುಖಂಡರ ಸಭೆ ನಡೆಯಲಿದೆ. ಚಂಗನಾ ಶ್ಶೇರಿ ಬಿಷಪ್ ಮಾರ್ಕ್  ಪೆರುಂ ಡೋಟ ಆರ್ಚ್ ಬಿಷಪ್ ಸುಕಿ ಪಾಕಂ, ಪಾಳಯಂ  ಇಮಾಂ ವಿ.ಪಿ. ಸುಹೈಬ್ ಮೌಲವಿ, ಪಾಣಕ್ಕಾಡ್ ಮುನವರಲಿ ತಂಙಳ್, ಗುರುರತ್ನಂ ಜ್ಞಾನೇಶ್ವರಿ ಸಹಿತ ಹಲವರು ತಲುಪಿದ ಸಭೆ ಸೇರಿದೆ.

ರಾಜ್ಯದಲ್ಲಿ ನಾರ್ಕೋಟಿಕ್ ಜಿಹಾದ್ ಕಾರ್ಯಾಚರಿಸುತ್ತಿದೆಯೆಂದು ಪಾಲಾ ಬಿಷಪ್ ಈ ಹಿಂದೆ ಹೇಳಿಕೆ ನೀಡಿದ್ದರ. ಇದು ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿವಿಧ ಸಂಘಟನೆಗಳು ಬಿಷಪ್‌ರ ಪರ ಹಾಗೂ ವಿರೋಧ ನಿಲುವು ತಳೆದಿದ್ದರು.  

NO COMMENTS

LEAVE A REPLY